Tuesday, January 27, 2026
Tuesday, January 27, 2026
spot_img

ಗಿನ್ನಿಸ್ ದಾಖಲೆ ಬರೆದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ: ವಿದ್ಯಾರ್ಥಿಗಳ ಭವಿಷ್ಯಕ್ಕೆ ‘ನಮೋ’ ಸಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮತ್ತು ಜನಪ್ರಿಯ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ 2026ರ 9ನೇ ಆವೃತ್ತಿಯು ನವದೆಹಲಿಯ ಭಾರತ್ ಮಂಟಪಂನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬಾರಿ ಈ ಕಾರ್ಯಕ್ರಮವು ಕೇವಲ ಸಂವಾದವಾಗಿ ಉಳಿಯದೆ, ‘ಸಂಪೂರ್ಣ ಭಾರತ’ದ ಧ್ವನಿಯಾಗಿ ಮೂಡಿಬಂದಿದೆ.

ಈ ವರ್ಷದ ಕಾರ್ಯಕ್ರಮವು ಅಂಕಿಅಂಶಗಳ ದೃಷ್ಟಿಯಿಂದಲೂ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ:

ಒಟ್ಟು ಭಾಗವಹಿಸುವಿಕೆ: ದಾಖಲೆಯ 6.76 ಕೋಟಿ ಜನರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ನೋಂದಣಿ: 4.5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 2.26 ಕೋಟಿ ಜನರು ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

2025ರಲ್ಲಿ 245 ದೇಶಗಳ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಈ ಕಾರ್ಯಕ್ರಮವು ಗಿನ್ನೆಸ್ ದಾಖಲೆ ನಿರ್ಮಿಸಿರುವುದು ವಿಶೇಷ.

ಪ್ರಧಾನಿಯವರು ಕೊಯಮತ್ತೂರು, ರಾಯ್‌ಪುರ, ದೇವ್ ಮೋಗ್ರಾ ಮತ್ತು ಗುವಾಹಟಿಯ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿ ಅವರ ಗೊಂದಲಗಳಿಗೆ ಪರಿಹಾರ ಸೂಚಿಸಿದರು. ಈ ಬಾರಿಯ ಕಾರ್ಯಕ್ರಮದಲ್ಲಿ ಕೇವಲ ಪರೀಕ್ಷೆ ಮಾತ್ರವಲ್ಲದೆ, ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಏಳು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲಲಾಯಿತು:

ಕ್ರೀಡೆ, ಮಾನಸಿಕ ಆರೋಗ್ಯ, ಪೌಷ್ಟಿಕಾಂಶ, ತಂತ್ರಜ್ಞಾನ, ಹಣಕಾಸು ಸಾಕ್ಷರತೆ ಮತ್ತು ಸೃಜನಶೀಲತೆ.

2018ರಲ್ಲಿ ಕೇವಲ 22,000 ಜನರೊಂದಿಗೆ ಆರಂಭವಾದ ಈ ಪುಟ್ಟ ಹೆಜ್ಜೆ, ಇಂದು ಕೋಟ್ಯಂತರ ಜನರನ್ನು ತಲುಪುವ ಮೂಲಕ ದೊಡ್ಡ ಮಟ್ಟದ ‘ಜನ್ ಆಂದೋಲನ’ವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಮತ್ತು ಪೋಷಕರು-ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹೇರದಂತೆ ಜಾಗೃತಿ ಮೂಡಿಸುವುದು ಈ ವೇದಿಕೆಯ ಮೂಲ ಉದ್ದೇಶವಾಗಿದೆ.

2025ರ ಫೆಬ್ರವರಿ 10 ರಂದು ದೆಹಲಿಯ ಸುಂದರ್ ನರ್ಸರಿಯಲ್ಲಿ ನಡೆದ ವಿಶಿಷ್ಟ ಮಾದರಿಯ ಕಾರ್ಯಕ್ರಮದಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 36 ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !