ಸ್ನಾನ ಮಾಡುವಾಗ ಕೈ ತುಂಬಾ ಕೂದಲು ಬಂದ್ರೆ ಯಾರಿಗಾದರೂ ಆತಂಕವಾಗುವುದು ಸಹಜ. ಆದರೆ ಸಮಯದಲ್ಲೇ ಸರಿಯಾದ ಆರೈಕೆ ಮಾಡಿದರೆ, ಕೂದಲು ಉದುರುವುದನ್ನು ನಿಯಂತ್ರಿಸುವುದು ಸಂಪೂರ್ಣ ಸಾಧ್ಯ. ರಾಸಾಯನಿಕ ಚಿಕಿತ್ಸೆಗೆ ಮೊದಲು ಮನೆಯಲ್ಲೇ ಸಿಗುವ ನೈಸರ್ಗಿಕ ಪದಾರ್ಥಗಳಿಂದ ಕೂದಲಿಗೆ ಶಕ್ತಿ ನೀಡುವುದು ಉತ್ತಮ ಆಯ್ಕೆ.
- ತೆಂಗಿನೆಣ್ಣೆ ಮತ್ತು ಕರಿಬೇವು – ತೆಂಗಿನೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದರಲ್ಲಿ ಕರಿಬೇವು ಹಾಕಿ ಫ್ರೈ ಮಾಡಿ. ತಣಿಸಿದ ನಂತರ ತಲೆ ಚರ್ಮಕ್ಕೆ ಮಸಾಜ್ ಮಾಡಿದರೆ ಬೇರುಗಳು ಬಲವಾಗುತ್ತವೆ.
- ಈರುಳ್ಳಿ ರಸ – ಈರುಳ್ಳಿ ರಸದಲ್ಲಿ ಸಲ್ಪರ್ ಅಂಶ ಹೆಚ್ಚಿರುವುದರಿಂದ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ತಲೆಗೆ ಹಚ್ಚಿ.
- ಮೆಂತೆ ಬೀಜದ ಪೇಸ್ಟ್ – ಮೆಂತೆ ಬೀಜಗಳನ್ನು ನೆನೆಸಿ ಪೇಸ್ಟ್ ಮಾಡಿ ಹಚ್ಚಿದರೆ ಡ್ಯಾಂಡ್ರಫ್ ಕಡಿಮೆಯಾಗುತ್ತದೆ ಮತ್ತು ಹೇರ್ ಫಾಲ್ ನಿಯಂತ್ರಣವಾಗುತ್ತದೆ.
- ಆಲೋವೆರಾ ಜೆಲ್ – ತಲೆ ಚರ್ಮವನ್ನು ತಂಪುಗೊಳಿಸಿ ಕೂದಲಿಗೆ ತೇವಾಂಶ ನೀಡುತ್ತದೆ.
ಇವುಗಳ ಜೊತೆಗೆ ಪ್ರೋಟೀನ್, ಐರನ್, ವಿಟಮಿನ್‌ಗಳಿಂದ ಸಮೃದ್ಧ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ತಲೆಮಸಾಜ್ ಕೂಡ ಅತ್ಯಗತ್ಯ. ನಿಯಮಿತ ಆರೈಕೆ ಇದ್ದರೆ ಕೂದಲು ಮತ್ತೆ ದಟ್ಟವಾಗುವುದು ಖಂಡಿತ.

