ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಬಿಳಿ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುಬಾರಿ ಹೇರ್ ಡೈ ಅಥವಾ ಕಾಸ್ಮೆಟಿಕ್ ಪ್ರಾಡಕ್ಟ್‌ಗಳನ್ನು ಬಳಸದೇ, ಕೇವಲ ಮನೆಯಲ್ಲೇ ಲಭ್ಯವಾಗುವ ಪದಾರ್ಥಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಬಳಸುವುದರಿಂದ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿಕೊಳ್ಳಬಹುದು. ಇದು ಕೇವಲ ಬಣ್ಣವನ್ನೇ ಅಲ್ಲ, ಕೂದಲಿನ ಆರೋಗ್ಯವನ್ನೂ ಕಾಪಾಡುತ್ತದೆ.
ನೆಲ್ಲಿಕಾಯಿ ಉಪಯೋಗ
ಒಣಗಿದ ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಕೂದಲಿಗೆ ನೈಸರ್ಗಿಕ ಬಣ್ಣ ನೀಡುತ್ತವೆ. ಜೊತೆಗೆ ಕೂದಲಿನ ಬೇರುಗಳನ್ನು ಗಟ್ಟಿಯಾಗಿಸಿ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಲು ಸಹಕಾರಿ.
ಬ್ಲಾಕ್ ಟೀ ಪ್ರಯೋಜನ
ಬ್ಲಾಕ್ ಟೀಯಲ್ಲಿ ಇರುವ ನೈಸರ್ಗಿಕ ಬಣ್ಣ ಕೂದಲಿಗೆ ಕಪ್ಪು ಕಲರ್ ನೀಡುತ್ತದೆ. ಇದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ ಮತ್ತು ಕಾಂತಿಯುತವಾಗುತ್ತದೆ.
ಕರಿಬೇವು ಶಕ್ತಿ
ಕರಿಬೇವಿನ ಸೊಪ್ಪನ್ನು ಒಣಗಿಸಿ ಬಳಸಿದರೆ ಅದು ಕೂದಲಿಗೆ ಬಲ, ಬಣ್ಣ ಮತ್ತು ಕಾಂತಿ ನೀಡುತ್ತದೆ. ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕರಿಬೇವು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಎಣ್ಣೆ ತಯಾರಿಸುವ ವಿಧಾನ
ಕಬ್ಬಿಣದ ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಒಣಗಿದ ನೆಲ್ಲಿಕಾಯಿ ಹಾಕಿ ಗುಳ್ಳೆ ಬರುವವರೆಗೆ ಕಾಯಿಸಿ. ನಂತರ ಅದರಲ್ಲಿ ಟೀ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಚೆನ್ನಾಗಿ ಕುದಿಸಿ.
ಈ ತಯಾರಾದ ಎಣ್ಣೆಯನ್ನು ತಣಿದ ನಂತರ ಕೂದಲಿಗೆ ಹಚ್ಚಿ ಒಂದು-ಎರಡು ಗಂಟೆಗಳ ಬಳಿಕ ಸೀಗೆಕಾಯಿ ಬಳಸಿ ಕೂದಲು ತೊಳೆಯಬೇಕು. ಹೀಗೆ ಮಾಡಿದರೆ ಬಿಳಿ ಕೂದಲು ನಿಧಾನವಾಗಿ ಕಪ್ಪಾಗುವುದರ ಜೊತೆಗೆ ಕೂದಲು ದಪ್ಪವಾಗಿ, ಆರೋಗ್ಯಕರವಾಗಿ ಬೆಳೆಯುತ್ತದೆ.