ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಹೆಣ್ಮಕ್ಕಳಿಗೆ ಖುಷಿ ಸುದ್ದಿ ಸಿಕ್ಕಿದೆ. ನಾಳೆಯಿಂದಲೇ ಪಿಂಕ್ ಆಟೋ ಸಖಿ ಓಡಾಟ ಆರಂಭವಾಗಲಿದೆ.ಪ್ರಯಾಣದ ಸಮಯದಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕೆಟ್ಟ ಅನುಭವಗಳನ್ನು ತಡೆಗಟ್ಟಲು ಸಖಿ ಆಟೋ ರಸ್ತೆಗೆ ಇಳಿದಿದೆ.
ಸಖಿ ಎಂದರೆ ಸ್ನೇಹಿತೆ ಎಂದರ್ಥ. ಸ್ನೇಹದಲ್ಲಿಯೇ ಈ ಸೇವೆ ನಡೆಯಲಿದೆ. ಮಹಿಳಾ ಚಾಲಕರಿರುವ ಈ ಸಖಿ ಆಟೋ ರಾತ್ರಿ ಹನ್ನೆರಡು ಗಂಟೆವರೆಗೂ ಕಾರ್ಯ ನಿರ್ವಹಿಸಲಿದೆ.
ಪ್ರಾಯೋಗಿಕವಾಗಿ ಜನವರಿಯಲ್ಲಿ ಈ ಸೇವೆ ಆರಂಭಿಸಲಾಗಿದ್ದು, 17 ಯಶಸ್ವಿ ಟ್ರಿಪ್ ನಡೆಸಲಾಗಿದೆ. 21 ರಿಂದ 40 ವರ್ಷದೊಳಗಿನ 50 ಮಂದಿ ಚಾಲಕಿಯರಿದ್ದಾರೆ. ಸಖಿ ಆಟೋ ದರ ಪೀಕ್ ಅವರ್‌ನಲ್ಲಿಯೂ ಬದಲಾಗೋದಿಲ್ಲ.
ಮೊದಲ ಎರಡು ಕಿಲೋಮೀಟರ್ 50 ಇದ್ದರೆ, ಅನಂತರ ಪ್ರತಿ ಕಿಲೋಮೀಟರ್ಗೆ 20 ಹೆಚ್ಚುವರಿ ದರ ವಿಧಿಸಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿವರೆಗೂ ಈ ಸೇವೆ ಇರಲಿದೆ. ಮುಂದಿನ ದಿನಗಳಲ್ಲಿ 24 ಗಂಟೆಗಳ ಕಾಲ ಆಟೋ ಸೇವೆ ನೀಡುವ ಗುರಿ ಹೊಂದಿದೆ. ಸಖಿ ಆಟೋ ಬುಕ್ ಮಾಡಲು ವ್ಯಾಟ್ಸ್ಆ್ಯಪ್ ಸಂಖ್ಯೆ 6361933364 ಹಾಗೂ ride.sakhiwomen.in ಜಾಲತಾಣಕ್ಕೆ ಹೋಗಿ ಆಟೋ ಬುಕ್ ಮಾಡಬಹುದು.



