ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿಗೆ ಕಿರುಕುಳ ನೀಡಿದ ಆರೋಪದಲ್ಲಿ ನಿರ್ಮಾಪಕ, ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯವರನ್ನು ಗೋವಿಂದರಾಜನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವು ಬಂಧಿಸಿತ್ತು.ಬಳಿಕ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ.
ಈ ವೇಳೆ ಅರವಿಂದ್, ‘2023ರ ಮಾರ್ಚ್ 28ಕ್ಕೆ ಇವರ ಪರಿಚಯ ಆಯಿತು. ಬಳಿಕ ನನಗೆ ಹತ್ತಿರ ಆದರು. ಆ ನಂತರ ನಮ್ಮ ಲಿವ್-ಇನ್-ರಿಲೇಷನ್ಶಿಪ್ ಶುರುವಾಯಿತು. 2023ರ ಅಕ್ಟೋಬರ್‌ನಲ್ಲಿ ಅವರು ಬೇರೆ ಹುಡುಗನ ಕಡೆ ಗಮನ ಹರಿಸಿದರು. ಆತ ಮನೆಗೆ ಬಂದು ಹೋಗುತ್ತಿದ್ದಾನೆ ಎಂಬುದು ತಿಳಿಯಿತು. ಅದನ್ನು ಪ್ರಶ್ನೆ ಮಾಡಿದೆ. ತಾನು ಯಾರಿಗೂ ಉತ್ತರ ಕೊಡಬೇಕಾದ ಅಗತ್ಯ ಇಲ್ಲ ಅಂತ ಹೇಳಿದರು. ನಾವಿಬ್ಬರು ದೂರ ಆದೆವು. ಆ ಬಳಿಕ 2024ರಲ್ಲಿ ನಾನು ಅವರ ಫೋಟೋಗಳನ್ನು ತಪ್ಪಾಗಿ ಬಿಂಬಿಸುತ್ತಿದ್ದೇನೆ ಅಂತ ಆರೋಪ ಮಾಡಿದರು’ ಎಂದು ತಿಳಿಸಿದ್ದಾರೆ.
ನಾವು ರಿಲೇಷನ್ಶಿಪ್ನಲ್ಲಿ ಇದ್ದಾಗ ತೆಗೆದುಕೊಂಡ ಫೋಟೋಗಳು ಅವು. ಅವರು ಹಾಗೂ ಅವರ ಫ್ಯಾನ್ ಕ್ಲಬ್‌ನವರೇ ಹಾಕಿದ್ದರು. ಇನ್ಸ್ಟಾಗ್ರಾಮ್ನಲ್ಲಿ ನಾನು ಕೂಡ ಒಂದಷ್ಟು ಫೋಟೋಗಳನ್ನು ಹಾಕಿದ್ದೆ. ಅದರಲ್ಲಿ ಅಶ್ಲೀಲ ಎಂಬಂತಹ ಫೋಟೋ ಯಾವುದೂ ಇಲ್ಲ. ಇತ್ತೀಚೆಗೆ ಅವರ ಮನೆಗೆ, ಅವರ ಫ್ರೆಂಡ್ ಹೆಂಡತಿಗೆ, ಓನರ್‌ಗೆ ನಾನು ಫೋಟೋ ಕಳಿಸಿರಬಹುದು ಅಂತ ಆರೋಪಿಸಿದ್ದಾರೆ. ನನಗೆ ಪೊಲೀಸರು ನೋಟಿಸ್ ನೀಡಿದಾಗ ನಾನು ಶ್ರೀಲಂಕಾದಲ್ಲಿ ಇದ್ದೆ. ವಾಪಸ್ ಬರುವಾಗ ನನ್ನನ್ನು ಪೊಲೀಸರು ವಶಕ್ಕೆ ಪಡೆದರು’ ಎಂದು ಅರವಿಂದ್ ಹೇಳಿದ್ದಾರೆ.
ಇದೆಲ್ಲವೂ ಸ್ಟೇಷನ್ ಬೇಲೆಬಲ್ ಅಫೆನ್ಸ್ ಆದರೂ ಕೂಡ ನನ್ನನ್ನು ಕೋರ್ಟ್‌ಗೆ ಕರೆದುಕೊಂಡು ಹೋದರು. ಹಾಗಾಗಿ ಕೋರ್ಟ್ ಜಾಮೀನು ನೀಡಿದೆ. ಪೊಲೀಸರು ಸಹಕರಿಸಿದ್ದಾರೆ. ನನ್ನ ವಾದವನ್ನು ಕೂಡ ಕೇಳಿದ್ದಾರೆ. ತನಿಖೆ ಮಾಡಿ, ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿದ್ದಾರೆ. ನಿಜವಾಗಿ ಯಾರು ಆಕೆಗೆ ಫೋಟೋ, ಲೆಟರ್ ಕಳಿಸಿದ್ದಾರೋ ಗೊತ್ತಿಲ್ಲ’ ಎಂದಿದ್ದಾರೆ.
ನಟಿಯ ಇನ್‌ಸ್ಟಾ ಪೋಸ್ಟ್ ಕೂಡ ವೈರಲ್
ಇದರ ಬೆನ್ನಲ್ಲೇ ನಟಿಯ ಇನ್‌ಸ್ಟಾ ಸ್ಟೋರಿ ಪೋಸ್ಟ್ ಕೂಡ ವೈರಲ್ ಆಗಿದೆ. “ಕಳೆದ ಕೆಲವು ದಿನಗಳು ನನಗೆ ತುಂಬಾ ಭಾರವಾಗಿದ್ದವು. ನನ್ನ ವೈಯಕ್ತಿಕ ವಿಷಯ ಈಗ ಸಾರ್ವಜನಿಕವಾಗಿದೆ. ಪೊಲೀಸರ, ಕಾನೂನು, ಮಾಧ್ಯಮ ಮತ್ತು ಅನೇಕ ಜನರ ಬೆಂಬಲ ಸಿಕ್ಕಿದ್ದಕ್ಕೆ ನಾನು ಕೃತಜ್ಞೆ. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ. ಎಲ್ಲರೂ ನನ್ನನ್ನು ನಂಬಲೇಬೇಕು ಅಥವಾ ಬೆಂಬಲಿಸಲೇಬೇಕು ಅನ್ನೋ ನಿರೀಕ್ಷೆ ನನಗಿಲ್ಲ. ಆದ್ರೆ ಯಾರನ್ನಾದರೂ ಕೆಡವೋ, ಕೀಳು ಮಾತಾಡೋ ಹಕ್ಕು ಯಾರಿಗೂ ಇಲ್ಲ. ಸೋಶಿಯಲ್ ಮೀಡಿಯಾದ ದ್ವೇಷ-ಬುಲ್ಲಿಯಿಂಗ್ ಎಲ್ಲರೂ ತಾಳಲು ಸಾಧ್ಯವಾಗುವುದಿಲ್ಲ. ನನ್ನ ಸುರಕ್ಷತೆ, ನನ್ನ ಮನಶಾಂತಿ ಮತ್ತು ನನ್ನ ಬದುಕಿಗಾಗಿ ನಾನು ಮಾಡಬೇಕಾದುದನ್ನೇ ಮಾಡಿದ್ದೇನೆ. ನನ್ನ ಸತ್ಯದ ಮೇಲೆ ನಾನು ದೃಢವಾಗಿದ್ದೇನೆ. ನನ್ನ ಜೊತೆ ನಿಂತ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

