Saturday, October 11, 2025

ಹರಿಯಾಣದ ಪೊಲೀಸ್ ಅಧಿಕಾರಿ ಆತ್ಮಹತ್ಯೆ : ಪೂರಣ್ ಕುಮಾರ್ ಪತ್ನಿಗೆ ಪತ್ರ ಬರೆದ ಸೋನಿಯಾ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಪೂರಣ್ ಕುಮಾರ್ ಅವರ ಪತ್ನಿ ಅಮ್ನೀತ್ ಪಿ. ಕುಮಾರ್ ಅವರಿಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪತ್ರ ಬರೆದು ಸಾಂತ್ವಾನ ಹೇಳಿದ್ದಾರೆ.

ಐಪಿಎಸ್ ಅಧಿಕಾರಿಯ ಸಾವು ಆಘಾತಕಾರಿಯಾಗಿದೆ ಮತ್ತು ತೀವ್ರ ದುಃಖ ತಂದಿದೆ . ನ್ಯಾಯಕ್ಕಾಗಿ ಹೋರಾಟದಲ್ಲಿ ಇಡೀ ದೇಶವು ತಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾರೆ.

ಹರಿಯಾಣ ಸರ್ಕಾರದ ಆಯುಕ್ತ ಮತ್ತು ಕಾರ್ಯದರ್ಶಿ ಅಮ್ನೀತ್ ಅವರಿಗೆ ಸೋನಿಯಾ ಬರೆದ ಪತ್ರದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಸಾವಿನ ಸುದ್ದಿ ತೀವ್ರ ದುಃಖ ತಂದಿದೆ. ಈ ಕಷ್ಟದ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ತಿಳಿಸಿದ್ದಾರೆ.

ವೈ. ಪೂರಣ್ ಕುಮಾರ್ ಅವರ ಸಾವು ಅಧಿಕಾರದಲ್ಲಿರುವವರ ಪೂರ್ವಾಗ್ರಹ ಪೀಡಿತ ಮತ್ತು ಪಕ್ಷಪಾತದ ಮನೋಭಾವ ಕಾರಣ. ಇದು ಅತ್ಯಂತ ಹಿರಿಯ ಅಧಿಕಾರಿಗಳನ್ನು ಸಹ ಸಾಮಾಜಿಕ ನ್ಯಾಯದಿಂದ ವಂಚಿತಗೊಳಿಸುತ್ತಿದೆ.ನಾನು ಸೇರಿದಂತೆ ದೇಶದ ಲಕ್ಷಾಂತರ ಜನರು ನಿಮ್ಮೊಂದಿಗೆ ಇದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ದೇವರು ನಿಮಗೆ ತಾಳ್ಮೆ, ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ತಿಳಿಸಿದ್ದಾರೆ.

error: Content is protected !!