January18, 2026
Sunday, January 18, 2026
spot_img

ಹಾಸನ: ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಪುರಸಭೆ ಆವರಣದಲ್ಲಿನ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದ್ದು, ಸ್ಥಳೀಯ ವ್ಯಾಪಾರಿಗಳು ಪ್ರತಿದಿನ ದೇವರಿಗೆ ಕೈಮುಗಿಸಿ ವ್ಯಾಪಾರ ಆರಂಭಿಸುತ್ತಾರೆ. ಶನಿವಾರ ರಾತ್ರಿ ಪುರಸಭೆ ಗೇಟ್‌ ಬೀಗ ಹಾಕಿ ತೆರಳಿದ ನಂತರ, ಭಕ್ತರು ಭಾನುವಾರ ಬೆಳಿಗ್ಗೆ ದೇವರಿಗೆ ಕೈಮುಗ್ಗಲು ಹೋದಾಗ, ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಗೊಳಿಸಿರುವುದನ್ನು ಗಮನಿಸಿದ್ದರು.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಈ ದುಷ್ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದಾಗಿ ವರದಿ ಇದೆ. ಕೆಲವರು ಇದು ಕೋಮು ಸೌಹಾರ್ದ ಕದಡಲು ನಿಂದನೀಯ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ.

ಸ್ಥಳೀಯರು ಹಾಗೂ ಭಕ್ತರು ತಪ್ಪಿತಸ್ಥರ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ. ದೇವಾಲಯದ ಭದ್ರತೆ ಹೆಚ್ಚಿಸಲು ಮತ್ತು ಭಕ್ತರ ಭದ್ರತೆ ಕಾಪಾಡಲು ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.

Must Read

error: Content is protected !!