ದಕ್ಷಿಣ ಭಾರತದ ಮನೆಗಳಲ್ಲಿ ಬೆಳಗಿನ ಉಪಹಾರಕ್ಕೆ ಅಥವಾ ಸಂಜೆ ಟೀ ಜೊತೆ ತಿನ್ನಲು ಪಡ್ಡು (ಪನೀಯಾರಂ) ಎಂದರೆ ತುಂಬಾ ಫೇವರಿಟ್. ಸಾಮಾನ್ಯವಾಗಿ ದೋಸೆ ಹಿಟ್ಟು ಬಳಸಿ ಮಾಡುವ ಪಡ್ಡು ಎಲ್ಲರಿಗೂ ಪರಿಚಿತ. ಆದರೆ ಅವಲಕ್ಕಿ ಬಳಸಿ ಮಾಡುವ ಪಡ್ಡು ಆರೋಗ್ಯಕರವೂ, ಹಗುರವೂ ಆಗಿದ್ದು, ರುಚಿಯಲ್ಲೂ ವಿಶೇಷವಾಗಿರುತ್ತದೆ. ತಕ್ಷಣ ತಯಾರಾಗುವ ಈ ರೆಸಿಪಿ ಮಕ್ಕಳಿಗೂ, ದೊಡ್ಡವರಿಗೂ ಇಷ್ಟವಾಗುತ್ತದೆ.
ಬೇಕಾಗುವ ಪದಾರ್ಥಗಳು:
ಅವಲಕ್ಕಿ – 1 ಕಪ್ (ಮಧ್ಯಮ ಗಾತ್ರದ)
ಅಕ್ಕಿ ಹಿಟ್ಟು – 1 ಕಪ್
ರವೆ – ½ ಕಪ್
ಮೊಸರು – ½ ಕಪ್
ಈರುಳ್ಳಿ – 1 (ಸಣ್ಣದಾಗಿ ಕತ್ತರಿಸಿ)
ಹಸಿಮೆಣಸು – 2 (ಸಣ್ಣದಾಗಿ ಕತ್ತರಿಸಿ)
ಶುಂಠಿ – 1 ಚಮಚ
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯವಷ್ಟು
ಎಣ್ಣೆ – ಬೇಕಾದಷ್ಟು
ತಯಾರಿಸುವ ವಿಧಾನ:
ಮೊದಲಿಗೆ ಅವಲಕ್ಕಿಯನ್ನು ಸ್ವಲ್ಪ ನೀರಿನಲ್ಲಿ ತೊಳೆದು 10 ನಿಮಿಷ ನೆನೆಸಿ. ನಂತರ ಅದನ್ನು ಮೃದುವಾಗಿ ಒತ್ತಿ. ಈಗ ಒಂದು ದೊಡ್ಡ ಪಾತ್ರೆಯಲ್ಲಿ ಅವಲಕ್ಕಿ, ಅಕ್ಕಿ ಹಿಟ್ಟು, ರವಾ ಸೇರಿಸಿ. ಇದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿರುವಷ್ಟು ನೀರು ಸೇರಿಸಿ ಪಡ್ಡು ಹಿಟ್ಟಿನಂತೆ ತಯಾರಿಸಿಕೊಳ್ಳಿ.
ಈಗ ಇದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಪಡ್ಡು ಪ್ಯಾನ್ ಗೆ ಎಣ್ಣೆ ಹಾಕಿ, ತಯಾರಿಸಿದ ಹಿಟ್ಟು ಸ್ವಲ್ಪಸ್ವಲ್ಪ ಹಾಕಿ. ಎರಡೂ ಬದಿಯೂ ಹೊಂಬಣ್ಣ ಬರುವವರೆಗೆ ಬೇಯಿಸಿ.