Wednesday, September 10, 2025

Ghee Coffee | ಘೀ ಕಾಫಿ ಕುಡಿದಿದ್ದೀರಾ? ಇದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ?

ಬೆಳಿಗ್ಗೆ ಎದ್ದು ಒಂದು ಕಪ್ ಟೀ ಅಥವಾ ಕಾಫಿ ಇಲ್ಲದೆ ದಿನವನ್ನು ಪ್ರಾರಂಭಿಸುವುದು ಅನೇಕರಿಗೆ ಅಸಾಧ್ಯ. ಕೆಲವರು ದಿನಕ್ಕೆ ಐದು ಆರು ಬಾರಿ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸದಲ್ಲಿರುತ್ತಾರೆ. ಆದರೆ ಇತ್ತೀಚೆಗೆ ಕಾಫಿ ಲವರ್ಸ್ ನಡುವೆ ಹೊಸ ಟ್ರೆಂಡ್‌ ಆರಂಭವಾಗಿದೆ – ಅದು ಬುಲೆಟ್ ಪ್ರೂಫ್ ಕಾಫಿ ಅಥವಾ ಘೀ ಕಾಫಿ. ಸಾಮಾನ್ಯ ಹಾಲಿನ ಬದಲು ಕಾಫಿಗೆ ತುಪ್ಪ ಮಿಶ್ರಣ ಮಾಡುವ ಈ ಪದ್ಧತಿ ಆರೋಗ್ಯಕ್ಕೆ ಅನೇಕ ಲಾಭಗಳನ್ನು ತರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರಿಟಿಗಳೂ ಈ ವಿಧಾನವನ್ನು ಅನುಸರಿಸುತ್ತಿರುವುದು ವಿಶೇಷ.

ಹೊಟ್ಟೆ ತೊಂದರೆಗಳಿಗೆ ಪರಿಹಾರ

ಕಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಕೆಲವರಿಗೆ ಆಮ್ಲೀಯತೆ, ಗ್ಯಾಸ್ಟ್ರಿಕ್ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ತುಪ್ಪ ಮಿಶ್ರಣ ಮಾಡಿದ ಕಾಫಿ ಹೊಟ್ಟೆಯೊಳಗಿನ ಆಮ್ಲೀಯತೆಯನ್ನು ಕಡಿಮೆಗೊಳಿಸಿ, ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.

ತೂಕ ಇಳಿಕೆಗೆ ಸಹಕಾರಿ

ಬುಲೆಟ್ ಪ್ರೂಫ್ ಕಾಫಿ ಹಸಿವನ್ನು ನಿಯಂತ್ರಿಸುವುದರಿಂದ ಹೆಚ್ಚು ಆಹಾರ ಸೇವಿಸುವ ಅಭ್ಯಾಸ ಕಡಿಮೆಯಾಗುತ್ತದೆ. ಜೊತೆಗೆ ದೇಹದಲ್ಲಿ ಕೊಬ್ಬಿನ ಅಂಶವನ್ನು ಬೇರ್ಪಡಿಸಿ ತೂಕ ಇಳಿಕೆಗೆ ಸಹಾಯಮಾಡುತ್ತದೆ.

ಶಕ್ತಿ ಮತ್ತು ಕ್ಯಾಲೊರಿಗಳ ಪೂರೈಕೆ

ತುಪ್ಪವು ಉತ್ತಮ ಕೊಬ್ಬಿನ ಅಂಶವನ್ನು ಹೊಂದಿರುವುದರಿಂದ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಬೆಳಗಿನ ಉಪಹಾರದೊಂದಿಗೆ ಇದನ್ನು ಸೇವಿಸಿದರೆ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.

ಮೆದುಳಿನ ಆರೋಗ್ಯ

ಬುಲೆಟ್ ಪ್ರೂಫ್ ಕಾಫಿ ನರನಾಡಿಗಳ ಸಂಪರ್ಕವನ್ನು ಸುಧಾರಿಸಿ ಹಾರ್ಮೋನ್ ಉತ್ಪಾದನೆಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ಮನಸ್ಸಿಗೆ ಶಾಂತಿ, ಗಮನ ಹಾಗೂ ಉತ್ಪಾದಕತೆ ಹೆಚ್ಚುತ್ತದೆ.

ಸಕ್ಕರೆ ನಿಯಂತ್ರಣ

ಈ ಕಾಫಿ ದೇಹದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಡಯಟ್ ಪಾಲಿಸುವವರು ಇದರಿಂದ ಹೆಚ್ಚಿನ ಲಾಭ ಪಡೆಯಬಹುದು.

ಇದನ್ನೂ ಓದಿ