ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿ ಹೆಸರಲ್ಲಿ ಸಲುಗೆಯಿಂದ ವರ್ತಿಸಿ, ನಂತರ ನನ್ನ ಖಾಸಗಿ ಫೋಟೋಗಳನ್ನು ತೋರಿಸಿ, ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಹಿನ್ನಲೆ ಯುವತಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ವಿಭೂತಿಕೆರೆ ಗ್ರಾಮದ ಯುವತಿ 22 ವರ್ಷದ ವರ್ಷಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತುಮಕೂರಿನ ಕುಣಿಗಲ್ ಮೂಲದ ಅಭಿ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
ವರ್ಷಿಣಿ ಮೈಸೂರಿನ ಖಾಸಗಿ ಕಾಲೇಜಿನಲ್ಲಿ MSC ವ್ಯಾಸಂಗ ಮಾಡುತ್ತಿದ್ದಳು. ಸಾಯುವ ಮುನ್ನ ವರ್ಷಿಣಿ ಡೆತ್ ನೋಟ್ ಬರೆದಿಟ್ಟು ಅಭಿ ದೇವರದೊಡ್ಡಿ ವಿರುದ್ಧ ಆರೋಪ ಮಾಡಿದ್ದಾಳೆ. ಅಮ್ಮ ಸಾಧ್ಯವಾದರೆ ನನ್ನ ಕ್ಷಮಿಸು. ಅವನನ್ನು ನಂಬಿ ಮೋಸ ಹೋದೆ, ಬ್ಲ್ಯಾಕ್ಮೇಲ್ ಮಾಡಿ ನನ್ನಿಂದ ಚಿನ್ನ, ಹಣ ತೆಗೆದುಕೊಂಡಿದ್ದನು.
ನನ್ನ ಕೆಲ ಖಾಸಗಿ ಫೋಟೋಗಳನ್ನು ತೋರಿಸಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ, ಫೋಟೋಗಳನ್ನು ಡಿಲೀಟ್ ಮಾಡೋದಾಗಿ ಆತ ಹೇಳಿದ್ದರಿಂದ ಆತನ ಜೊತೆ ದೇಹ ಹಂಚಿಕೊಂಡೆ ಪರಿಣಾಮ ಗರ್ಭಿಣಿ ಆದೆ. ಆತನೇ ಕರೆದುಕೊಂಡು ಹೋಗಿ ಗರ್ಭಪಾತವನ್ನೂ ಮಾಡಿಸಿದ್ದನು. ಈಗ ಬದುಕುವ ಆಸೆ ಇಲ್ಲ. ಅದಕ್ಕಾಗಿ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ಅಮ್ಮ ಸಾಧ್ಯವಾದರೆ ನನ್ನನ್ನು ಕ್ಷಮಿಸು ಎಂದು ವರ್ಷಿಣಿ ಡೆಟ್ ನೋಟ್ ನಲ್ಲಿ ಬರೆದಿದ್ದಾಳೆ.

