Thursday, September 25, 2025

ತಾನು ಅಧಿಕಾರ ತ್ಯಜಿಸಲು ಸಿದ್ಧ, ಯಾವಾಗ ಅಂದರೆ…: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಸ್ಫೋಟಕ ಹೇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ತಾನು ಅಧಿಕಾರ ತ್ಯಜಿಸಲು ಸಿದ್ಧನಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕ ಹೇಳಿದ್ದಾರೆ.

ಖಾಸಗಿ ವೆಬ್‌ಸೈಟ್‌ ಜೊತೆ ಮಾತನಾಡಿದ ಝೆಲೆನ್ಸ್ಕಿ’ಯುದ್ಧವನ್ನು ಮುಗಿಸುವುದು ಮಾತ್ರ ನನ್ನ ಗುರಿ. ಯುದ್ಧ ಮುಗಿದು ನಮ್ಮ ದೇಶದಲ್ಲಿ ಶಾಂತಿ ನೆಲೆಸಿದ ನಂತರ ಅಧಿಕಾರ ನಡೆಸಬೇಕೆಂಬ ಆಸೆ ನನಗಿಲ್ಲ. ಮುಂದಿನ ಅವಧಿಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಂತಿಕಾಲದಲ್ಲಿ ಉಕ್ರೇನ್ ಅನ್ನು ಮುನ್ನಡೆಸುವ ಉದ್ದೇಶವಿಲ್ಲ . ಕದನ ವಿರಾಮ ಜಾರಿಗೆ ಬಂದರೆ ಸಂಸತ್ತಿನಲ್ಲಿ ಚುನಾವಣೆಗಳನ್ನು ಆಯೋಜಿಸುವಂತೆ ಕೇಳುವುದಾಗಿಯೂ ಅವರು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಉನ್ನತ ಮಟ್ಟದ ಓವಲ್ ಆಫೀಸ್ ಸಭೆಯಲ್ಲಿ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‌ನಲ್ಲಿ ಶಾಂತಿ ಪುನಃಸ್ಥಾಪಿಸಿದ ನಂತರ ಚುನಾವಣೆಗಳನ್ನು ನಡೆಸಲು ಮುಕ್ತರಾಗಿರುವುದಾಗಿ ಹೇಳಿದ್ದಾರೆ.

ಜನರು ಪ್ರಜಾಪ್ರಭುತ್ವ, ಮುಕ್ತ, ಕಾನೂನುಬದ್ಧ ಚುನಾವಣೆಯನ್ನು ನಡೆಸಲು ಸಾಧ್ಯವಾಗಬೇಕು ಎಂದು ಹೇಳಿದರು. ಉಕ್ರೇನ್‌ನಲ್ಲಿ ಚುನಾವಣೆಗಳನ್ನು ಪ್ರಸ್ತುತ ಸಮರ ಕಾನೂನಿನ ಅಡಿಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದರು.

ಯುದ್ಧವಿಲ್ಲದಿದ್ದರೆ ಝೆಲೆನ್ಸ್ಕಿ ಅವರ 5 ವರ್ಷಗಳ ಅವಧಿ ಮೇ 2024ರಲ್ಲಿ ಕೊನೆಗೊಳ್ಳುತ್ತಿತ್ತು.

ಇದನ್ನೂ ಓದಿ