ನಾವು ದಿನನಿತ್ಯ ತಿನ್ನುವ ಸ್ನ್ಯಾಕ್ಸ್‌ಗಳು ಹೊಟ್ಟೆ ತುಂಬಿಸಿದರೂ ಆರೋಗ್ಯ ನೀಡುವುದಿಲ್ಲ ಅನ್ನೋ ಭಾವನೆ ಹಲವರಿಗೆ ಇದೆ. ಆದರೆ ಹಸಿವನ್ನೂ ತಣಿಸಿ, ದೇಹಕ್ಕೂ ಲಾಭ ಕೊಡೋ ಒಂದು ಸರಳ ಆಹಾರ ಇದೆ ಅಂದ್ರೆ ಅದು ಮಖಾನ(ಕಮಲದ ಬೀಜ). ಉತ್ತರ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿರುವ ಈ ಮಖಾನ ಈಗ ಆರೋಗ್ಯ ತಜ್ಞರ ಫೇವರಿಟ್ ಫುಡ್ ಆಗಿದೆ. ನೋಡಲು ಸಾದಾ, ತಿನ್ನಲು ಲೈಟ್, ಆದರೆ ಒಳಗಡೆ ಆರೋಗ್ಯದ ಖಜಾನೆಯೇ ಅಡಗಿದೆ.
- ಹೃದಯ ಆರೋಗ್ಯಕ್ಕೆ ಮಿತ್ರ: ಮಖಾನದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಹಾಗೂ ಮ್ಯಾಗ್ನೀಷಿಯಂ ಸಮೃದ್ಧವಾಗಿದೆ. ಇದು ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಹೃದಯದ ಮೇಲೆ ಒತ್ತಡ ಬೀಳದಂತೆ ಕಾಪಾಡುತ್ತದೆ.
- ತೂಕ ಇಳಿಸಲು ಸಹಕಾರಿ: ಕ್ಯಾಲೊರಿ ಕಡಿಮೆ, ಫೈಬರ್ ಹೆಚ್ಚು ಇರುವ ಮಖಾನ ಬೇಗನೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ಅನಗತ್ಯವಾಗಿ ಹೆಚ್ಚು ತಿನ್ನುವ ಅಭ್ಯಾಸವನ್ನು ಇದು ಕಡಿಮೆ ಮಾಡುತ್ತದೆ.
- ಮಧುಮೇಹ ನಿಯಂತ್ರಣಕ್ಕೆ ಉತ್ತಮ: ಮಖಾನ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಠಾತ್ ಹೆಚ್ಚಿಸದೇ ನಿಧಾನವಾಗಿ ಎನರ್ಜಿ ನೀಡುತ್ತದೆ.
- ಜೀರ್ಣಕ್ರಿಯೆ ಸುಧಾರಣೆ: ಫೈಬರ್‌ಯುಕ್ತ ಮಖಾನ ಅಜೀರ್ಣ, ಗ್ಯಾಸ್ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ. ಹೊಟ್ಟೆಗೆ ಲೈಟ್ ಅನ್ನಿಸುವ ಆಹಾರ ಇದಾಗಿದೆ.
- ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳ: ಪ್ರೋಟೀನ್, ಆಂಟಿಆಕ್ಸಿಡೆಂಟ್‌ಗಳು ದೇಹದ ಶಕ್ತಿಯನ್ನು ಹೆಚ್ಚಿಸಿ, ರೋಗಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

