March 15, 2026
Sunday, March 15, 2026
spot_img

ಎದೆ ಬಡಿತ ಜೋರಾಗಿದೆ…! ಇದು ಪ್ರೀತಿಯ ಸಂಕೇತ ಅಲ್ಲ: ಮೊದಲು ಡಾಕ್ಟರ್ ಹತ್ರ ಹೋಗಿ

ಕೆಲವೊಮ್ಮೆ ಏನೂ ಕಾರಣ ಇಲ್ಲದೆ ಎದೆ ಜೋರಾಗಿ ಬಡಿದುಕೊಳ್ಳುತ್ತೆ ಅಲ್ವಾ? ಕೆಲವರು ಅದನ್ನ ಭಾವನಾತ್ಮಕ ಕ್ಷಣಗಳ ಜೊತೆ ಸಂಪರ್ಕಿಸಿಕೊಳ್ಳುತ್ತಾರೆ. ಆದರೆ ದೇಹ ನೀಡುವ ಪ್ರತಿಯೊಂದು ಸಂಕೇತವೂ ಅಷ್ಟೇನೂ ರೋಮ್ಯಾಂಟಿಕ್ ಅರ್ಥ ಕೊಡೋದಿಲ್ಲ.. ಆದರೆ ನಿಜ ಹೇಳಬೇಕು ಅಂದ್ರೆ, ದೇಹ ಕೊಡೋ ಈ ಸೂಚನೆಗಳನ್ನು ಲೈಟ್ ಆಗಿ ತೆಗೆದುಕೊಳ್ಳೋದು ಕೂಡ ಸರಿಯಲ್ಲ. ಹೃದಯ ಜೋರಾಗಿ ಹೊಡೆದುಕೊಳ್ಳೋದು ಕೆಲವೊಮ್ಮೆ ಆರೋಗ್ಯದ ಸಮಸ್ಯೆಯ ಸಂಕೇತವೂ ಆಗಿರಬಹುದು. ಅದಕ್ಕೆ ಕಾರಣ ಏನು ಅಂತ ಸ್ವಲ್ಪ ಗಮನ ಕೊಡೋದು ತುಂಬಾ ಮುಖ್ಯ.

  • ಅತಿಯಾದ ಒತ್ತಡ, ಆತಂಕ ಅಥವಾ ನರ್ವಸ್ ಆಗಿರುವಾಗ ಹೃದಯ ಬಡಿತ ವೇಗವಾಗಬಹುದು. ಇದು ಸಾಮಾನ್ಯ ಪ್ರತಿಕ್ರಿಯೆಯಾದರೂ ನಿರಂತರವಾಗಿದ್ದರೆ ದೇಹ ವಿಶ್ರಾಂತಿ ಕೇಳುತ್ತಿರುವ ಸೂಚನೆ.
  • ಹೈ ಬಿಪಿ ಅಥವಾ ಲೋ ಬಿಪಿ ಇರುವವರಲ್ಲಿ ಎದೆ ಬಡಿತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ದೀರ್ಘಕಾಲ ಮುಂದುವರಿದರೆ ಹೃದಯಕ್ಕೆ ಒತ್ತಡ ಹೆಚ್ಚಾಗಬಹುದು.
  • ಹಿಮೋಗ್ಲೋಬಿನ್ ಕಡಿಮೆ ಇದ್ದರೆ ಅಥವಾ ದೇಹದಲ್ಲಿ ಶಕ್ತಿ ಕೊರತೆಯಿದ್ದರೆ ಹೃದಯ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಬಡಿತ ಹೆಚ್ಚಾಗುತ್ತದೆ.
  • ಹೆಚ್ಚು ಕಾಫಿ, ನಿದ್ರೆ ಕೊರತೆ, ಅಸ್ವಸ್ಥ ಜೀವನಶೈಲಿ ಕೂಡ ಎದೆ ಬಡಿತ ಹೆಚ್ಚಿಸುವ ಕಾರಣವಾಗಬಹುದು. ಸರಿಯಾದ ರೂಟೀನ್ ಅಗತ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !