January18, 2026
Sunday, January 18, 2026
spot_img

ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿರಂತರ ಮಳೆಯಿಂದಾಗಿ ಜಮ್ಮು-ಕಾಶ್ಮೀರದಲ್ಲಿ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ, ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆ ಸಂಪರ್ಕವಾದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಬೆಳಗ್ಗೆ 8.30 ರಿಂದ ಇಂದು ಬೆಳಿಗ್ಗೆ 5.30 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮುವಿನಲ್ಲಿ 81 ಮಿ.ಮೀ., ರಿಯಾಸಿ 203 ಮಿ.ಮೀ., ಕತ್ರಾ 193 ಮಿ.ಮೀ., ಸಾಂಬಾ 48 ಮಿ.ಮೀ., ರಾಂಬನ್ 82 ಮಿ.ಮೀ., ಬಡೇರ್ವಾ 96.2 ಮಿ.ಮೀ., ಬಟೋಟ್ 157.3 ಮಿ.ಮೀ., ದೋಡಾ 114 ಮಿ.ಮೀ., ಕಿಶ್ತ್ವಾರ್ 50 ಮಿ.ಮೀ., ಬನಿಹಾಲ್ 95 ಮಿ.ಮೀ., ರಾಜೌರಿ 57.4 ಮಿ.ಮೀ., ಪಹಲ್ಗಾಮ್ 55 ಮಿ.ಮೀ., ಕೊಕರ್ನಾಗ್ 68.2 ಮಿ.ಮೀ., ಶ್ರೀನಗರ ವೀಕ್ಷಣಾಲಯ 32 ಮಿ.ಮೀ. ಮತ್ತು ಖಾಜಿಗುಂಡ್ 68 ಮಿ.ಮೀ. ಮಳೆಯಾಗಿದೆ.

ನಿರಂತರ ಮಳೆಯಿಂದಾಗಿ, ಜಮ್ಮು ಪ್ರದೇಶದ ಚೆನಾಬ್ ಮತ್ತು ಕಾಶ್ಮೀರದ ಝೀಲಂನಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಜಮ್ಮು ಪ್ರದೇಶದ ಚೆನಾಬ್ ಮತ್ತು ಉಧಂಪುರದಲ್ಲಿ ನೀರು ಅಪಾಯದ ಮಟ್ಟ ಮತ್ತು ಪ್ರವಾಹ ಎಚ್ಚರಿಕೆಯ ಗುರುತು ದಾಟಿದ್ದರೆ, ಕಣಿವೆಯ ಝೀಲಂನಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ. ನಿರಂತರ ಮಳೆಯಿಂದಾಗಿ ದಕ್ಷಿಣ ಕಾಶ್ಮೀರದ ವೈಶೋ ನಲ್ಲದಲ್ಲಿ ನೀರಿನ ಮಟ್ಟ ಕಳೆದ ಎರಡು ಗಂಟೆಗಳಲ್ಲಿ ಏರಿಕೆಯಾಗಿದೆ.

Must Read

error: Content is protected !!