Thursday, September 11, 2025

ಬೆಂಗಳೂರು ಸೇರಿ ಹಲವೆಡೆ ಧಾರಾಕಾರ ಮಳೆ: ಮರಗಳು ಧರೆಗೆ, ರಸ್ತೆ ತುಂಬಾ ನೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿವೆ.

ಬೆಂಗಳೂರಿನ ರಾಜಾಜಿನಗರ 4ನೇ ಬ್ಲಾಕ್‌ನಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಐದು ಕಾರ್, ಟಾಟಾ ಏಸ್, ಮೂರ್ನಾಲ್ಕು ಬೈಕ್ ಹಾಗೂ ಎರಡು ಮನೆಗಳ ಮನೆ ಬಿದ್ದಿದೆ. ಮನೆಯೊಂದಕ್ಕೆ ಇದರಿಂದ ದಿಗ್ಭಂಧನ ಹಾಕಿದಂತಾಗಿದ್ದು, ಪರಿಣಾಮ ಮನೆಯಿಂದ ಹೊರಬರಲಾರದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಅವಾಂತರಗಳು ಸಂಭವಿಸಿವೆ. ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಹಾಗಾಗಿ ವಾಹನ ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಕೆಲ ಮಾರ್ಗಗಳಲ್ಲಿ ನಿಧಾನಗತಿಯ ಸಂಚಾರವಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ