ಬ್ಯೂಟಿ ಟ್ರೆಂಡ್ಸ್ ಎಂದರೆ ಬದಲಾವಣೆ. ಒಂದೇ ಲುಕ್ ತುಂಬಾ ಕಾಲ ಉಳಿಯಲ್ಲ. ಈಗ ಅದೇ ಸಾಲಿಗೆ ಹೊಸದಾಗಿ ಸೇರಿರುವ ಟ್ರೆಂಡ್ “ಹ್ಯಾಲೋ ಲಿಪ್ಸ್ (Halo Lips)”. ಸೋಶಿಯಲ್ ಮೀಡಿಯಾದಲ್ಲಿ ಮೇಕಪ್ ಪ್ರಿಯರ ಗಮನ ಸೆಳೆಯುತ್ತಿರುವ ಈ ಶೈಲಿ, ಲಿಪ್ ಮೇಕಪ್‌ಗೆ ಹೊಸ ಆಯಾಮ ನೀಡುತ್ತಿದೆ.
ಹ್ಯಾಲೋ ಲಿಪ್ಸ್ ಎಂದರೆ ತುಟಿಗಳ ಮಧ್ಯಭಾಗವನ್ನು ಲೈಟ್ ಷೇಡ್‌ನಲ್ಲಿ ಹೈಲೈಟ್ ಮಾಡಿ, ಹೊರಭಾಗವನ್ನು ಸ್ವಲ್ಪ ಗಾಢ ಬಣ್ಣದಿಂದ ಡಿಫೈನ್ ಮಾಡುವುದು. ಇದರ ಫಲಿತಾಂಶವಾಗಿ ತುಟಿಗಳು ಹೆಚ್ಚು ತುಂಬಿದಂತೆ, ಸಾಫ್ಟ್ ಹಾಗೂ ನ್ಯಾಚುರಲ್ ಆಗಿ ಕಾಣಿಸುತ್ತವೆ. ಓಂಬ್ರೆ ಲಿಪ್ಸ್‌ಗಿಂತ ಇದು ಹೆಚ್ಚು ಸೂಕ್ಷ್ಮ ಮತ್ತು ಎಲಿಗಂಟ್ ಲುಕ್ ನೀಡುತ್ತದೆ.
ಇದನ್ನೂ ಓದಿ:
ಈ ಟ್ರೆಂಡ್‌ನ ವಿಶೇಷತೆ ಎಂದರೆ, ಇದು ಮಿನಿಮಲ್ ಮೇಕಪ್‌ಗೂ ಸೂಕ್ತ. ಹೆವಿ ಕಂಟೂರ್ ಅಥವಾ ಓವರ್ ಲೈನಿಂಗ್ ಬೇಡ. ಸರಿಯಾದ ಶೇಡ್ ಆಯ್ಕೆ ಮತ್ತು ಸ್ಮೂತ್ ಬ್ಲೆಂಡಿಂಗ್ ಇದ್ದರೆ ಸಾಕು. ನ್ಯೂಡ್, ಪಿಂಕ್, ಪೀಚ್ ಅಥವಾ ರೋಸ್ ಟೋನ್‌ಗಳಲ್ಲಿ ಹ್ಯಾಲೋ ಲಿಪ್ಸ್ ದಿನನಿತ್ಯದ ಲುಕ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.



