February 1, 2026
Sunday, February 1, 2026
spot_img

📊 | ಷೇರುಮಾರುಕಟ್ಟೆಗೆ ಎಫೆಕ್ಟ್‌ ಮಾಡಿದ ಏಳು ಬಜೆಟ್‌ ಘೋಷಣೆಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ಈ ಸಾಲಿನ ಬಜೆಟ್‌ನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದಾರೆ. ಬಜೆಟ್‌ ಮಂಡನೆ ನಂತರದಿಂದ ಷೇರುಪೇಟೆಯಲ್ಲಿ ನಾನಾ ರೀತಿಯ ಬದಲಾವಣೆಗಳು ಕಾಣುತ್ತಿವೆ. ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರುವಂತಹ ಅಂಶಗಳು ಬಜೆಟ್‌ನಲ್ಲಿವೆ. ಯಾವ ಅಂಶಗಳು ನೋಡಿ..

ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲಿ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್​ಟಿಟಿಯನ್ನು ಶೇ. 0.05ಕ್ಕೆ ಏರಿಸಲಾಗಿದೆ. ಎಫ್ ಅಂಡ್ ಓ ಟ್ರೇಡಿಂಗ್ ಮಾಡುತ್ತಿರುವವರಿಗೆ ನಿರುತ್ಸಾಹ ಮೂಡಬಹುದು.

ಸ್ಟಾಕ್ ಬಯ್​ಬ್ಯಾಕ್ (ಷೇರು ಮರುಖರೀದಿ) ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ವಯ ಆಗುತ್ತದೆ. ಕಂಪನಿ ಮಾಲೀಕರಾದರೆ ಈಕ್ವಿಟಿ ಬಯ್​ಬ್ಯಾಕ್ ಮೇಲೆ ಶೇ. 22 ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಇದೆ. ನಾನ್-ಕಾರ್ಪೊರೇಟ್ ಷೇರುದಾರರಾದರೆ ಶೇ. 30 ಟ್ಯಾಕ್ಸ್ ಇರುತ್ತದೆ.

ಎನ್​ಆರ್​ಐಗಳ ಈಕ್ವಿಟಿ ಮಾಲಕತ್ವ ಮಿತಿಯನ್ನು ಶೇ. 5ರಿಂದ ಶೇ. 10ಕ್ಕೆ ಏರಿಸಲಾಗಿದೆ. ವಿದೇಶಗಳಲ್ಲಿ ಇವರ ರೀಟೇಲ್ ಹೋಲ್ಡಿಂಗ್ ಅನ್ನು ಶೇ. 10ರಿಂದ ಶೇ. 24ಕ್ಕೆ ವಿಸ್ತರಿಸಲಾಗಿದೆ.

ಇನ್​ಫ್ರಾಸ್​ಟ್ರಕ್ಚರ್ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸರ್ಕಾರ ಮಾಡುವ ಕ್ಯಾಪೆಕ್ಸ್ ಅಥವಾ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂಗೆ ಏರಿಕೆ ಮಾಡಲಾಗಿದೆ.

ವಿತ್ತೀಯ ಕೊರತೆಯ ಗುರಿ 2025-26ರಲ್ಲಿ ಶೇ. 4.4 ಇತ್ತು. ಮುಂದಿನ ವರ್ಷಕ್ಕೆ ಅದನ್ನು ಶೇ. 4.3ಕ್ಕೆ ಇಳಿಸಲಾಗಿದೆ.

ಸೆಮಿಕಂಡಕ್ಟರ್ಸ್, ರೇರ್ ಅರ್ಥ್ ವಸ್ತುಗಳು, ಬಯೋಸಿಮಿಲರ್​ಗಳು, ಕ್ಲೀನ್ ಟೆಕ್ನಾಲಜಿ ಅಭಿವೃದ್ಧಿಗೆ ಒ್ತು ಕೊಡಲಾಗಿದೆ. ಈ ಕ್ಷೇತ್ರದಲ್ಲಿರುವ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಬಹುದು.

2026-27ರ ವರ್ಷಕ್ಕೆ ಬಂಡವಾಳ ಹಿಂತೆಗೆತದ ಗುರಿಯನ್ನು 80,000 ಕೋಟಿ ರೂಗೆ ಇರಿಸಲಾಗಿದೆ. ಹಿಂದಿನ ವರ್ಷದಲ್ಲಿ 33,837 ಕೋಟಿ ರೂ ಗುರಿ ಇಡಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !