Wednesday, December 10, 2025

LIFE | Mental peace ಕಾಪಾಡಿಕೊಳ್ಳೋಕೆ ಸರಳ ಅಭ್ಯಾಸಗಳು ಇಲ್ಲಿವೆ! ನೀವೂ ಫಾಲೋ ಮಾಡಿ

ಇಂದಿನ ವೇಗದ ಜೀವನಶೈಲಿಯಲ್ಲಿ ಮನಸ್ಸಿಗೆ ನೆಮ್ಮದಿ ಸಿಗೋದು ಒಂದು ದೊಡ್ಡ ಸ್ವಲಾಗಿದೆ. ಕೆಲಸದ ಒತ್ತಡ, ಸಂಬಂಧಗಳ ಗೊಂದಲ, ಭವಿಷ್ಯದ ಚಿಂತೆ ಎಲ್ಲಾ ಸೇರಿ ಮಾನಸಿಕ ಶಾಂತಿಯನ್ನು ಕಸಿದುಕೊಳ್ಳುತ್ತವೆ. ಆದರೆ mental peace ಕಾಪಾಡಿಕೊಳ್ಳಲು ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ. ದಿನನಿತ್ಯ ಪಾಲಿಸಬಹುದಾದ ಚಿಕ್ಕ ಅಭ್ಯಾಸಗಳೇ ಮನಸ್ಸಿಗೆ ಸಮತೋಲನ ಕೊಡಲು ಸಾಕಾಗುತ್ತವೆ.

  • ದಿನವನ್ನು ಮೌನದಿಂದ ಆರಂಭಿಸುವ ಅಭ್ಯಾಸ: ಬೆಳಗ್ಗೆ ಎದ್ದ ತಕ್ಷಣ ಫೋನ್ ಹಿಡಿಯದೇ 5–10 ನಿಮಿಷ ಮೌನದಲ್ಲಿ ಕುಳಿತು ಉಸಿರಾಟದ ಮೇಲೆ ಗಮನ ಕೊಟ್ಟರೆ ಮನಸ್ಸು ಶಾಂತವಾಗಿರುತ್ತದೆ.
  • Negative ಮಾತುಗಳಿಂದ ದೂರ ಉಳಿಯುವುದು: ನಿರಂತರ ದೂರು, ಗಾಸಿಪ್ ಮತ್ತು ಟೀಕೆಗಳು ಮನಸ್ಸನ್ನು ಅಶಾಂತಗೊಳಿಸುತ್ತವೆ. ಆದ್ದರಿಂದ ಅಂಥ ಸಂಭಾಷಣೆಗಳಿಂದ ಸಾಧ್ಯವಾದಷ್ಟು ದೂರ ಇರೋದು ಉತ್ತಮ.
  • ದಿನದ ಕೆಲಸಗಳಿಗೆ ಗಡಿ ಹಾಕಿಕೊಳ್ಳುವುದು: ಎಲ್ಲರಿಗೂ ಎಲ್ಲ ಸಮಯವೂ ಲಭ್ಯ ಇರೋ ಅಗತ್ಯವಿಲ್ಲ. ನಿಮ್ಮ ಸಮಯಕ್ಕೆ ಮೌಲ್ಯ ಕೊಟ್ಟಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
  • ಸೆಲ್ಫ್ ಕೇರ್ : ಸಾಕಷ್ಟು ನಿದ್ರೆ, ಸರಳ ಆಹಾರ, ಸ್ವಲ್ಪ ವ್ಯಾಯಾಮ—ಇವು ಮನಸ್ಸಿಗೂ ದೇಹಕ್ಕೂ ಅಗತ್ಯ. ಸೆಲ್ಫ್ ಕೇರ್ ಸ್ವಾರ್ಥ ಅಲ್ಲ, ಅವಶ್ಯಕತೆ.
  • ಹೊಂದಿದ್ದದಕ್ಕೆ ಕೃತಜ್ಞತೆ ಬೆಳೆಸಿಕೊಳ್ಳುವುದು: ಪ್ರತಿ ದಿನ ಒಂದು ಒಳ್ಳೆಯ ವಿಚಾರ ನೆನಪಿಸಿಕೊಂಡರೆ ಮನಸ್ಸು ಧನಾತ್ಮಕವಾಗುತ್ತದೆ ಮತ್ತು ಅಶಾಂತಿ ಕಡಿಮೆಯಾಗುತ್ತದೆ.
error: Content is protected !!