ಹೊಸದಿಗಂತ ವರದಿ ಬೆಂಗಳೂರು:
SG ಪೈಪರ್ಸ್ ತಂಡವು ಹೀರೊ ಹಾಕಿ ಇಂಡಿಯಾ ಲೀಗ್ ಸೀಸನ್ 2ರ ನಾಯಕತ್ವ ತಂಡವನ್ನು ಘೋಷಿಸಿದೆ. ಭಾರತಕ್ಕೆ ಸೇರಿದ ಗೌರವಾನ್ವಿತ ಇಬ್ಬರು ಒಲಿಂಪಿಕ್ ಆಟಗಾರರಿಗೆ ನಾಯಕತ್ವ ಹೊಣೆಗಾರಿಕೆಯನ್ನು ನೀಡಿದ್ದಾರೆ. ಡಿಫೆಂಡರ್ ಜರ್ಮನ್‌ಪ್ರೀತ್ ಸಿಂಗ್ ಪುರುಷರ ತಂಡವನ್ನು ಮುನ್ನಡೆಸಲಿದ್ದು, ಆಸ್ಟ್ರೇಲಿಯಾದ ಆಟಗಾರ ಕೇ ವಿಲ್ಲಾಟ್ ಉಪನಾಯಕತ್ವ ವಹಿಸಲಿದ್ದಾರೆ. ಮಹಿಳೆಯರ ತಂಡದಲ್ಲಿ ನವನೀತ್ ಕೌರ್ ಅವರು ಮತ್ತೆ ನಾಯಕಿಯಾಗಿ ಮುಂದುವರಿಯಲಿದ್ದು, ಆಸ್ಟ್ರೇಲಿಯಾದ ಕೈಟ್ಲಿನ್ ನಾಬ್ಸ್ ಉಪನಾಯಕಿಯಾಗಿ ತಮ್ಮ ಮೊದಲ ಸೀಸನ್‌ಗೆ ತಂಡದಲ್ಲಿ ಸೇರುತ್ತಿದ್ದಾರೆ.
ಕಳೆದ ಸೀಸನ್‌ನಲ್ಲಿ ಜರ್ಮನ್‌ಪ್ರೀತ್ ಸಿಂಗ್ SG ಪೈಪರ್ಸ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. 2025ನೇ ಸಾಲಿನ ಏಷ್ಯಾಕಪ್‌ನಲ್ಲಿ ಅವರ ಅದ್ಭುತ ಪ್ರದರ್ಶನ ತಂಡವನ್ನು ಇನ್ನಷ್ಟು ಮುನ್ನಡೆಸಲಿದೆ. ಕೇ ವಿಲ್ಲಾಟ್ ಅವರಿಗೆ ಈ ಬಾರಿ ಅಧಿಕೃತ ನಾಯಕತ್ವ ಜವಾಬ್ದಾರಿ ನೀಡಲಾಗಿದೆ.ಕಳೆದ ಭಾನುವಾರ ಹಾಕಿ ಒನ್ ಟೂರ್ನಿಯಲ್ಲಿ ಹಾಕಿ ಕ್ಲಬ್ ಮೆಲ್ಬೋರ್ನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಕೇ ವಿಲ್ಲಾಟ್ ಪ್ರಮುಖ ಪಾತ್ರ ವಹಿಸಿದ್ದರು.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ನವನೀತ್ ಕೌರ್, ಮಹಿಳೆಯರ ತಂಡದಲ್ಲಿ ಮತ್ತೆ ನಾಯಕಿಯಾಗಿ ಮುಂದುವರಿಯಲಿದ್ದಾರೆ. ಅವರಿಗೆ ಸಹಕಾರ ನೀಡಲು ಕೈಟ್ಲಿನ್ ನಾಬ್ಸ್ ಸೇರುತ್ತಿದ್ದು, ಅವರ ಅಂತರಾಷ್ಟ್ರೀಯ ಅನುಭವ ತಂಡಕ್ಕೆ ಮತ್ತಷ್ಟು ಬಲ ಸಿಗಲಿದೆ. 2025ರ HIL ಪ್ರಶಸ್ತಿಯನ್ನು ಗೆದ್ದ ನಾಬ್ಸ್, ಕಳೆದ ಭಾನುವಾರ ಪರ್ಥ್ ಥಂಡರ್‌ಸ್ಟಿಕ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
ಒಲಿಂಪಿಕ್ ಕಂಚು ಪದಕ ವಿಜೇತ ಜರ್ಮನ್‌ಪ್ರೀತ್ ಸಿಂಗ್ ಮಾತನಾಡಿ ‘ಈ ಅವಕಾಶ ನೀಡಿದಕ್ಕಾಗಿ ಕೋಚ್‌ಗಳಿಗೆ ಮತ್ತು ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳು. ಕಿರಿಯ ಮತ್ತು ಹಿರಿಯ ಆಟಗಾರರ ಉತ್ತಮ ಮಿಶ್ರಣದೊಂದಿಗೆ ನಾವು ಬಲಿಷ್ಠ ತಂಡವನ್ನು ರೂಪಿಸುತ್ತಿದ್ದು, ಈ ಸೀಸನ್‌ನಲ್ಲಿ ಪ್ರಶಸ್ತಿಯನ್ನು ಮನೆಗೆ ತರುವ ಗುರಿಯಿದೆ ಎಂದರು.
ನವನೀತ್ ಕೌರ್ ಮಾತನಾಡಿ ‘ ಪುನಃ ತಂಡದ ನಾಯಕಿ ಜವಾಬ್ದಾರಿಯನ್ನು ನನಗೆ ನೀಡಿದ SG ಪೈಪರ್ಸ್‌ಗೆ ಧನ್ಯವಾದಗಳು. ಈ ಸೀಸನ್‌ನಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ಸಾಧಿಸುವ ನಂಬಿಕೆಯಿದೆ ಎಂದರು.
ಡಿಸೆಂಬರ್ 28 ರಂದು ಮಹಿಳೆಯರ ಲೀಗ್ ಮತ್ತು ಜನವರಿ 3 ರಂದು ಪುರುಷರ ಲೀಗ್ ಆರಂಭವಾಗಲಿದ್ದು, ಪುರುಷರ ತಂಡವು ಕಳೆದ ಸೀಸನ್ ಟ್ರೋಫಿ ಗೆದ್ದ ಕ್ಯಾಪ್ಟನ್ ರುಪೀಂದರ್ ಪಾಲ್ ಸಿಂಗ್ ಅವರನ್ನು ಸೇರಿಸಿಕೊಂಡಿದೆ. ಮಹಿಳಾ ತಂಡವು ಉದಿತಾ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ.
SG ಪೈಪರ್ಸ್ ಮಹಿಳಾ ತಂಡ – ವೇಳಾಪಟ್ಟಿ
ದಿನಾಂಕ ಪಂದ್ಯ ಸಮಯ ಸ್ಥಳ
ಡಿಸೆಂಬರ್ 28, 2025 (ಭಾನುವಾರ) ರಾಂಚಿ ರಾಯಲ್ಸ್ vs SG ಪೈಪರ್ಸ್ 7:30 PM ರಾಂಚಿ
ಡಿಸೆಂಬರ್ 31, 2025 (ಬುಧವಾರ) SG ಪೈಪರ್ಸ್ vs ಸೂರಮಾ ಹಾಕಿ ಕ್ಲಬ್ 7:30 PM ರಾಂಚಿ
ಜನವರಿ 1, 2026 (ಗುರುವಾರ) SG ಪೈಪರ್ಸ್ vs ರಾರ್ಹ್ ಬೆಂಗಾಲ್ ಟೈಗರ್ಸ್ 7:30 PM ರಾಂಚಿ
ಜನವರಿ 3, 2026 (ಶನಿವಾರ) ಸೂರಮಾ ಹಾಕಿ ಕ್ಲಬ್ vs SG ಪೈಪರ್ಸ್ 5:30 PM ರಾಂಚಿ
ಜನವರಿ 6, 2026 (ಮಂಗಳವಾರ) SG ಪೈಪರ್ಸ್ vs ರಾರ್ಹ್ ಬೆಂಗಾಲ್ ಟೈಗರ್ಸ್ 6:00 PM ರಾಂಚಿ
ಜನವರಿ 8, 2026 (ಗುರುವಾರ) SG ಪೈಪರ್ಸ್ vs ರಾಂಚಿ ರಾಯಲ್ಸ್ 6:00 PM ರಾಂಚಿ
SG ಪೈಪರ್ಸ್ ಪುರುಷರ ತಂಡ – ವೇಳಾಪಟ್ಟಿ
ದಿನಾಂಕ ಪಂದ್ಯ ಸಮಯ ಸ್ಥಳ
ಜನವರಿ 5, 2026 (ಸೋಮವಾರ) SG ಪೈಪರ್ಸ್ vs HIL GC 8:15 PM ಚೆನ್ನೈ
ಜನವರಿ 9, 2026 (ಶುಕ್ರವಾರ) ತಮಿಳುನಾಡು ಡ್ರಾಗನ್ಸ್ vs SG ಪೈಪರ್ಸ್ 8:15 PM ಚೆನ್ನೈ
ಜನವರಿ 12, 2026 (ಸೋಮವಾರ) SG ಪೈಪರ್ಸ್ vs ಹೈದರಾಬಾದ್ ತುಫಾನ್ಸ್ 6:15 PM ರಾಂಚಿ
ಜನವರಿ 14, 2026 (ಬುಧವಾರ) ರಾಂಚಿ ರಾಯಲ್ಸ್ vs SG ಪೈಪರ್ಸ್ 8:15 PM ರಾಂಚಿ
ಜನವರಿ 17, 2026 (ಶನಿವಾರ) ಕಾಳಿಂಗ ಲಾನ್ಸರ್ಸ್ vs SG ಪೈಪರ್ಸ್ 8:15 PM ಭುವನೇಶ್ವರ್
ಜನವರಿ 18, 2026 (ಭಾನುವಾರ) SG ಪೈಪರ್ಸ್ vs ರಾರ್ಹ್ ಬೆಂಗಾಲ್ ಟೈಗರ್ಸ್ 6:15 PM ಭುವನೇಶ್ವರ್
ಜನವರಿ 22, 2026 (ಗುರುವಾರ) ಸೂರಮಾ ಹಾಕಿ ಕ್ಲಬ್ vs SG ಪೈಪರ್ಸ್ 8:15 PM ಭುವನೇಶ್ವರ್

