March 5, 2026
Thursday, March 5, 2026
spot_img

ಬರೋಬ್ಬರಿ 21 ಲಕ್ಷ ಬಿಲ್‌ ಬಾಕಿ ಉಳಿಸಿಕೊಂಡ ಆಲಮಟ್ಟಿ ಡ್ಯಾಂ ಸೈಟ್‌ನ ವಿದ್ಯುತ್‌ ಸಂಪರ್ಕ ತೆಗೆದ ಹೆಸ್ಕಾಂ

ಹೊಸದಿಗಂತ ವರದಿ ಆಲಮಟ್ಟಿ :

ಆಲಮಟ್ಟಿ ಡ್ಯಾಂ ಸೈಟ್‌ನ ಕೆಬಿಜೆಎನ್‌ಎಲ್ ನೌಕರರು ವಾಸಿಸುವ ವಸಾಹತು ಸೇರಿದಂತೆ ಕೆಬಿಜೆಎನ್‌ಎಲ್ ಕಚೇರಿಗಳ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಅಕಾರಿಗಳು ಬುಧವಾರ ಸಂಜೆ ಕಡಿತಗೊಳಿಸಿದ ಪರಿಣಾಮ ಆಲಮಟ್ಟಿಯಲ್ಲಿ ಸಂಪೂರ್ಣ ಕತ್ತಲೆ ಆವರಿಸಿತ್ತು.

ವಸಾಹತು ಪ್ರದೇಶದ ಒಂದು ತಿಂಗಳ ವಿದ್ಯುತ್ ಬಿಲ್ ಅಂದಾಜು 21 ಲಕ್ಷ ರೂ.ಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮದವರು ಹೆಸ್ಕಾಂ ಪಾವತಿಸದ ಕಾರಣ ಬುಧವಾರ ಸಂಜೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ನಿಗಮದವರು ಬಾಕಿ ಬಿಲ್ ಗುರುವಾರ ತುಂಬುವ ಭರವಸೆ ನೀಡಿದ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು ನಿಡಗುಂದಿ ಹೆಸ್ಕಾಂ ಅಕಾರಿಗಳು ತಿಳಿಸಿದರು.

ಸಂಜೆ 4ರಿಂದ 7:30ರವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕಾಲೊನಿ ನೌಕರರು ಮತ್ತು ಕಚೇರಿ ಸಿಬ್ಬಂದಿ ತೊಂದರೆ ಅನುಭವಿಸುವಂತಾಯಿತು.ಎಲ್ಲೆಡೆ ಕತ್ತಲೆ ಆವರಿಸಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !