ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ – ಹಮಾಸ್ ನಡುವೆ ಶಾಂತಿ ಒಪ್ಪಂದ ಸಭೆಯಲ್ಲಿ ಭಾಗವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಈ ಯುದ್ಧವನ್ನು ನಿಲ್ಲಿಸಿದ್ದು ನಾನೇ ನೊಬೆಲ್ ಶಾಂತಿ ಪ್ರಶಸ್ತಿಗೆ ನಾನು ಅರ್ಹ ಎಂದು ಘೋಷಿಸಿಕೊಂಡಿದ್ದಾರೆ.
ಈ ಮೊದಲು ಅಮೆರಿಕದಲ್ಲಿರುವ ತಮ್ಮ ಶ್ವೇತಭವನದಲ್ಲಿ ಕುಳಿತು ನಾನು ಅಲ್ಲಿ ಯುದ್ಧ ನಿಲ್ಲಿಸಿದೆ, ಇಲ್ಲಿ ಯುದ್ಧ ನಿಲ್ಲಿಸಿದೆ ಎಂದು ಸುಮ್ಮನೇ ಹೇಳಿದರೆ ನೊಬೆಲ್ ಶಾಂತಿ ಪಾರಿತೋಷಕ ಸಿಕ್ಕಲ್ಲ ಎಂದು ಹೇಳುತ್ತಿದ್ದ ಟ್ರಂಪ್ ಈ ಬಾರಿ ಖುದ್ದು ಶಾಂತಿ ಒಪ್ಪಂದ ಸಭೆಯಲ್ಲಿ ಭಾಗವಹಿಸಿ ಯುದ್ಧವನ್ನು ನಿಲ್ಲಿಸಿದ್ದು ನಾನೇ ನೊಬೆಲ್ ಶಾಂತಿ ಪ್ರಶಸ್ತಿಗೆ ನಾನು ಅರ್ಹ ಎಂದು ಹೇಳಿಕೊಂಡಿದ್ದಾರೆ.
ಇಸ್ರೇಲಿನ ಸಂಸತ್ ಭವನದಲ್ಲಿ ಏರ್ಪಡಿಸಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಟ್ರಂಪ್ ಅವರು ವಿಶೇಷ ಅತಿಥಿಗಳಾಗಿ ಹೋಗಿದ್ದರು. ಇಲ್ಲಿ ಹೊಸ ಮಧ್ಯಪ್ರಾಚ್ಯದಲ್ಲಿ ಇದೊಂದು ಹೊಸ ಕಾಲಘಟ್ಟದ ಉದಯ ಎಂದ ಟ್ರಂಪ್, ಈಗ ಇಸ್ರೇಲಿಗೆ ಸ್ವರ್ಣ ಯುಗ ಆರಂಭವಾಗಿದೆ. ಈಗ ಅಮೆರಿಕಕ್ಕೆ ಇರುವಂಥ ಕಾಲಘಟ್ಟವೇ ಇಸ್ರೇಲಿಗೂ ಬರಲಿದೆ ಎಂದು ಹಾರೈಸಿದರು.