ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವೈವಾಹಿಕ ಜೀವನದಲ್ಲಿ ಕೋಪ, ಜಗಳ ಚಿಕ್ಕ ಸಮಸ್ಯೆಯನ್ನು ದೊಡ್ಡದ್ದು ಮಾಡಿ ವಿಚ್ಛೇದನದವರೆಗೆ ಹೋಗುತ್ತಾರೆ. ಆದರೆ ಕೋರ್ಟ್ ಇಂತಹ ಪ್ರಕರಣದಲ್ಲಿ ತುಂಬಾ ಯೋಚನೆ ಮಾಡಿ ತಿರ್ಮಾನವನ್ನು ತೆಗೆದುಕೊಳ್ಳುತ್ತದೆ. ಇದೀಗ ಇಲ್ಲೊಂದು ಅಂತಹದೇ ಘಟನೆಯೊಂದು ನಡೆದಿದೆ.
ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋಟ್ ತಿರಸ್ಕರಿಸಿದ್ದು, ಇದು ದೊಡ್ಡ ಸಮಸ್ಯೆಯೇ ಅಲ್ಲ ಎಂ. ಈ ವಿಚಾರವನ್ನು ಇಬ್ಬರು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಅಡಿಗ ಅವರನ್ನೊಳಗೊಂಡ ವಿಭಾಗೀಯ ಪೀಠ, ಈ ವಿಚ್ಛೇದನ ಕೇಳುತ್ತಿರುವ ವ್ಯಕ್ತಿಗೆ ಪತ್ನಿ ಅಲ್ಲ ಬೇಕಿರುವುದು ಪ್ರಾಮಾಣಿಕ ಸೇವಕಿ ಎಂದು ಕೋಟ್ ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು 2020ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ತೀರ್ಪಿನಲ್ಲಿ, ಮಹಿಳೆಯು ತಾನು ಮತ್ತು ತನ್ನ ತಾಯಿ ಸಾಕಷ್ಟು ವರದಕ್ಷಿಣೆ ಅಥವಾ ಆಸ್ತಿಯನ್ನು ನೀಡದ ಕಾರಣ ನನ್ನ ಗಂಡ ಅತೃಪ್ತರಾಗಿದ್ದಾರೆ. ಆ ಕಾರಣಕ್ಕೆ ವಿಚ್ಛೇದನ ಕೇಳುತ್ತಿದ್ದಾರೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ. ಈ ಬಗ್ಗೆ ಮನವರಿಕೆ ಮಾಡಿಕೊಂಡ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಮಹಿಳೆಯ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿಯ ಪ್ರಕಾರ ಈ ಇಬ್ಬರು ದಂಪತಿಗಳಿಗೆ 2015 ರಲ್ಲಿ ವಿವಾಹವಾಗಿತ್ತು. ಕೇವಲ 5 ದಿನಗಳು ಮಾತ್ರ ಇಬ್ಬರು ಸಂಸಾರ ಮಾಡಿದ್ದಾರೆ. ಇನ್ನು ಪತ್ನಿಗೆ ಸಿಂಗಾಪುರದಲ್ಲಿ ಕೆಲಸ, ಆಕೆ ತಾಯಿ ಜತೆಗೆ ವಾಸಿಸುತ್ತಿದ್ದರು.ಗಂಡ ಅಮೆರಿಕದಲ್ಲಿದ್ದ ಕಾರಣ, ಅಮೆರಿಕಕ್ಕೆ ಬರುವಂತೆ ಹಾಗೂ ಕೆಲಸವನ್ನು ಇಲ್ಲಿಗೆ ವರ್ಗಾವಣೆ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ಪತ್ನಿ ಒಪ್ಪಿಲ್ಲ, ಆ ಕಾರಣಕ್ಕೆ ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ತನ್ನ ಪತ್ನಿ ಅಮೆರಿಕಕ್ಕೆ ಬರದಿರಲು ಆಕೆಯ ತಾಯಿ ಕಾರಣ, ಅವರೇ ಅವಳನ್ನು ಇಲ್ಲಿಗೆ ಬರಲು ಬೀಡುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಅಮೆರಿಕಕ್ಕೆ ಬರಲು ಅನುಕೂಲವಾಗುವಂತೆ ಯಾವುದೇ ವೀಸಾ ವ್ಯವಸ್ಥೆಗಳನ್ನು ಮಾಡಿಲ್ಲ, ಎಲ್ಲದಕ್ಕೂ ಅವಳ ತಾಯಿ ಅಡ್ಡ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು, ಆತನಿಗೆ ಹೆಂಡತಿಗಿಂತ ಸೇವಕಿ ಬೇಕಾಗಿದೆ. ಅವನು ತನ್ನ ಜೀವನ ಸಂಗಾತಿಯಿಂದ ತುಂಬಾ ನಿರೀಕ್ಷಿಸುತ್ತಿರುವಂತೆ ಕಾಣುತ್ತದೆ. ತಾನು ಹೇಳಿದಂತೆ ಕೇಳಬೇಕು, ತನ್ನ ಇಚ್ಛೆಯಂತೆ ವರ್ತಿಸಬೇಕು ಎಂಬ ಹಂಬಲ ಆತನಿಗಿದೆ ಎಂದು ಕೋರ್ಟ್ ಹೇಳಿದೆ. ಈ ಕ್ಷುಲ್ಲಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ಹೇಳಿದೆ.

