Sunday, December 21, 2025

ಹೈ-ವೋಲ್ಟೇಜ್ ಫೈನಲ್: ಏಷ್ಯಾಕಪ್ ಮುಕುಟಕ್ಕಾಗಿ ಇಂದು ಭಾರತ-ಪಾಕ್ ಕಾದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಲೋಕದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಂದು ಅಂಡರ್-19 ಏಷ್ಯಾಕಪ್ ಏಕದಿನ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ದುಬೈನ ಐಸಿಸಿ ಅಕಾಡೆಮಿ ಮೈದಾನ ಈ ಮಹತ್ವದ ಹಣಾಹಣಿಗೆ ಸಾಕ್ಷಿಯಾಗಲಿದ್ದು, ಯುವ ಪಡೆಯ ಈ ಸಮರಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಲೀಗ್ ಹಂತದಲ್ಲಿ ಈಗಾಗಲೇ ಪಾಕಿಸ್ತಾನದ ವಿರುದ್ಧ 90 ರನ್​ಗಳ ಭರ್ಜರಿ ಜಯ ದಾಖಲಿಸಿರುವ ಭಾರತ ತಂಡ, ಮಾನಸಿಕವಾಗಿ ಮೇಲುಗೈ ಸಾಧಿಸಿದೆ. ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದ್ದು, ಇಂದು ಮತ್ತೊಮ್ಮೆ ಪಾಕ್ ಪಡೆಯನ್ನು ಮಣಿಸಿ ಏಷ್ಯಾದ ಚಾಂಪಿಯನ್ ಆಗಿ ಹೊರಹೊಮ್ಮುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ಪಂದ್ಯ ಆರಂಭ: ಬೆಳಗ್ಗೆ 10:30ಕ್ಕೆ.

ಟಾಸ್: ಬೆಳಗ್ಗೆ 10:00ಕ್ಕೆ.

ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ 1, 3 ಮತ್ತು 4 ಚಾನೆಲ್‌ಗಳಲ್ಲಿ ಪಂದ್ಯ ಲೈವ್ ಇರಲಿದೆ.

ಲೈವ್ ಸ್ಟ್ರೀಮಿಂಗ್: ಸೋನಿ ಲೈವ್ ಆ್ಯಪ್‌ನಲ್ಲಿ ವೀಕ್ಷಿಸಬಹುದು.

ಭಾರತ U19 ತಂಡಪಾಕಿಸ್ತಾನ U19 ತಂಡ
ಆಯುಷ್ ಮ್ಹಾತ್ರೆ (ನಾಯಕ)ಫರ್ಹಾನ್ ಯೂಸಫ್ (ನಾಯಕ)
ವೈಭವ್ ಸೂರ್ಯವಂಶಿ, ಆರೋನ್ ಜಾರ್ಜ್ಸಮೀರ್ ಮಿನ್​ಹಾಸ್, ಹಮ್ಝ ಝಹೂರ್
ವಿಹಾನ್ ಮಲ್ಹೋತ್ರಾ, ವೇದಾಂತ್ ತ್ರಿವೇದಿಉಸ್ಮಾನ್ ಖಾನ್, ಅಹ್ಮದ್ ಹುಸೇನ್
ಅಭಿಜ್ಞಾನ್ ಕುಂದು (WK), ಕಾನಿಷ್ಕ್ ಚೌಹಾಣ್ಹುಝೈಫಾ ಅಹ್ಸಾನ್, ದನಿಯಾಲ್ ಅಲಿ ಖಾನ್
ದೀಪೇಶ್ ದೇವೇಂದ್ರನ್, ಕಿಶನ್ ಕುಮಾರ್ ಸಿಂಗ್ಅಬ್ದುಲ್ ಸುಭಾನ್, ಅಲಿ ರಾಝ
ಉಧವ್ ಮೋಹನ್, ನಮನ್ ಪುಷ್ಪಾಕ್ಮೊಮಿನ್ ಕಮರ್, ಅಲಿ ಹಸ್ಸಾನ್ ಬಲಾಚ್
error: Content is protected !!