Friday, October 24, 2025

ನಟಿ ದಿವ್ಯಾ ಸುರೇಶ್‌ರಿಂದ ಹಿಟ್‌ & ರನ್‌? ಮಹಿಳೆಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್‌ ಕಾರು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ನಟಿ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅ.4ರ ರಾತ್ರಿ 1:30ಕ್ಕೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಅ.7 ರಂದು ಗಾಯಗೊಂಡ ಮಹಿಳೆಯ ಸಂಬಂಧಿ ಕಿರಣ್ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ. 

ದೂರಿನಲ್ಲಿ ನಮ್ಮ ಸಂಬಂಧಿ ಅನುಷಾಗೆ ಹುಷಾರಿರಲಿಲ್ಲ. ಹೀಗಾಗಿ ಅವತ್ತು ರಾತ್ರಿ ಗಿರಿನಗರದ ಆಸ್ಪತ್ರೆಗೆ ಹೋಗ್ತಾ ಇದ್ದೆವು. ಬೈಕ್‌ನಲ್ಲಿ ಮಧ್ಯೆ ಅನುಷಾ ಕುತಿದ್ರೂ. ನಾನು ಬೈಕ್ ಓಡಿಸುತ್ತಾ ಇದ್ದೇ, ಅನಿತಾ ಬೈಕ್ ಹಿಂದೆ ಕುಳಿತಿದ್ದರು. ಈ ವೇಳೆ ನಾಯಿ ಬೊಗಳಿದ್ದಕ್ಕೆ ಸ್ವಲ್ಪ ಬಲಕ್ಕೆ ಬೈಕ್‌ ತೆಗೆದುಕೊಂಡೆ. ಆಗ ಏಕಾಏಕಿ ಕ್ರಾಸ್‌ನಲ್ಲಿ ಬಂದು ದಿವ್ಯಾ ಸುರೇಶ್ ಕಾರು ಅನಿತಾ ಅವರ ಕಾಲಿಗೆ ಗುದ್ದಿತ್ತು. ದಿವ್ಯಾ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ಬಿದ್ದಿದ್ದೆವು.

ಕಾರು ಡಿಕ್ಕಿ ಹೊಡೆದಾಗ ಮಹಿಳೆಗೆ ಕಾಲಿನ ಮಂಡಿ ಚಿಪ್ಪಿಗೆ ಪೆಟ್ಟಾಗಿತ್ತು. ಕೂಡಲೇ ನಮ್ಮನ್ನು ನೋಡದೇ, ಕಾರು ನಿಲ್ಲಿಸದೇ ದಿವ್ಯಾ ಸುರೇಶ್ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಕಾಲಿನ ಮಂಡಿ ಚಿಪ್ಪು ಮುರಿದಿರೋದಾಗಿ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

error: Content is protected !!