Monday, September 15, 2025

ಕೊಡಗಿನ ತಲಕಾವೇರಿಯಲ್ಲಿ ಅ. 17ರಂದು ಪವಿತ್ರ ಕಾವೇರಿ ತೀರ್ಥೋದ್ಭವ

ಹೊಸದಿಗಂತ ಮಡಿಕೇರಿ:

ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಈ ಬಾರಿ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ತೀರ್ಥೋದ್ಭವವಾಗಲಿದೆ.


ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಅ.17ರ ಮಧ್ಯಾಹ್ನ ಮಕರ ಲಗ್ನದಲ್ಲಿ ಮಾತೆ ಕಾವೇರಿಯು ಭಕ್ತರಿಗೆ ತೀರ್ಥರೂಪಿಣಿಯಾಗಿ ದರ್ಶನ ನೀಡಲಿರುವುದಾಗಿ ಹೇಳಲಾಗಿದೆ.


ಕಾವೇರಿ ಜಾತ್ರೆಗೆ ಸಂಬಂಧಿಸಿದಂತೆ ಸೆ. 26ರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14ರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ಹಾಗೂ ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವ ವಿಧಿ ವಿಧಾನಗಳು ನಡೆಯಲಿರುವುದಾಗಿ ವಿವರಿಸಲಾಗಿದೆ.

ಇದನ್ನೂ ಓದಿ