Saturday, January 10, 2026

Home Remedies | ಶೀತ ಕಡಿಮೆ ಆಗಿದ್ರೂ ಕಫದಿಂದ ಕಿರಿಕಿರಿ ಆಗ್ತಿದ್ಯಾ? ಈ ಮನೆಮದ್ದು ಟ್ರೈ ಮಾಡಿ

ಶೀತದ ತೀವ್ರತೆ ಕಡಿಮೆಯಾದರೂ ಎದೆ ತುಂಬಿಕೊಂಡಂತೆ, ಗಂಟಲು ಕಟ್ಟಿದಂತೆ ಕಫ ಕಾಡುತ್ತಿದ್ದರೆ ಅದು ದಿನನಿತ್ಯದ ಚಟುವಟಿಕೆಗಳನ್ನೇ ಅಸ್ತವ್ಯಸ್ತ ಮಾಡುತ್ತದೆ. ಮಾತಾಡಲು ಕಷ್ಟ, ಉಸಿರಾಟದಲ್ಲಿ ಭಾರ, ಬೆಳಿಗ್ಗೆ ಎದ್ದಾಗ ಗಂಟಲು ಕ್ಲಿಯರ್ ಆಗದ ಅನುಭವ ಇವೆಲ್ಲವೂ ಕಫದ ಸಂಕೇತಗಳು. ಇಂತಹ ಸಮಯದಲ್ಲಿ ತಕ್ಷಣ ಔಷಧಿ ಹುಡುಕುವ ಬದಲು, ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಸರಿಯಾಗಿ ಬಳಸಿದರೆ ಕಫದ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.

ಬೆಚ್ಚಗಿನ ನೀರು + ಜೇನುತುಪ್ಪ:
ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಕಫ ಸಡಿಲವಾಗಿ ಹೊರಬರುತ್ತದೆ.

ಶುಂಠಿ ಕಷಾಯ:
ಶುಂಠಿ ತುಂಡುಗಳನ್ನು ನೀರಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲಿನ ಉರಿಯೂತ ಕಡಿಮೆಯಾಗಿ ಕಫ ನಿವಾರಣೆಗೆ ಸಹಾಯವಾಗುತ್ತದೆ.

ಅರಿಶಿನ ಹಾಲು:
ರಾತ್ರಿ ಮಲಗುವ ಮೊದಲು ಅರಿಶಿನ ಹಾಕಿದ ಬೆಚ್ಚಗಿನ ಹಾಲು ಕುಡಿದರೆ ಒಳಗಿನ ಸೋಂಕು ತಗ್ಗುತ್ತದೆ. ಜೊತೆಗೆ ಕಫದ ಸಮಸ್ಯೆ ಕಡಿಮಾಗುತ್ತೆ ಎನ್ನುತ್ತಾರೆ.

ಇದನ್ನೂ ಓದಿ: Viral | ತಾಯಿಯ ಮುಗ್ಧತೆ ಅನ್ನೋದು ಇದಕ್ಕೆ! ಚಳಿ ಆಗುತ್ತೆ ಅಂತ ಹುತಾತ್ಮ ಯೋಧನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ

ಆವಿ ತೆಗೆದುಕೊಳ್ಳುವುದು:
ದಿನಕ್ಕೆ ಒಂದೆರಡು ಬಾರಿ ಆವಿ ತೆಗೆದುಕೊಳ್ಳುವುದರಿಂದ ಮೂಗು ಮತ್ತು ಎದೆಯಲ್ಲಿ ಜಮೆಯಾದ ಕಫ ಕರಗುತ್ತದೆ.

ತಣ್ಣನೆಯ ಆಹಾರ ತಪ್ಪಿಸಿ:
ಐಸ್‌ಕ್ರೀಂ, ತಣ್ಣನೆಯ ಪಾನೀಯಗಳು ಕಫ ಹೆಚ್ಚಿಸುತ್ತವೆ. ಈ ಸಮಯದಲ್ಲಿ ಬಿಸಿ ಆಹಾರವೇ ಉತ್ತಮ.

ನಿಯಮಿತವಾಗಿ ಈ ಮನೆಮದ್ದುಗಳನ್ನು ಅನುಸರಿಸಿದರೆ ಕಫದ ಕಿರಿಕಿರಿ ನಿಧಾನವಾಗಿ ಕಡಿಮೆಯಾಗುತ್ತದೆ. ಆದರೆ ಸಮಸ್ಯೆ ಹೆಚ್ಚು ದಿನ ಮುಂದುವರಿದರೆ ವೈದ್ಯರ ಸಲಹೆ ಅಗತ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!