ಮಕ್ಕಳಿಗೆ ಶೀತ ಅಥವಾ ಸ್ವಲ್ಪ ಜ್ವರ ಬಂದ್ರೆ ಪೋಷಕರಿಗೆ ಆತಂಕ ಶುರುವಾಗೋದು ಸಹಜ. ಆದರೆ ಪ್ರತೀ ಸಾರಿ ಔಷಧಿ ನೀಡುವುದಕ್ಕಿಂತ ಮೊದಲು, ಮನೆಯಲ್ಲೇ ಮಾಡಬಹುದಾದ ಕೆಲ ಸರಳ ಪರಿಹಾರಗಳು ಮಕ್ಕಳಿಗೆ ಸ್ವಲ್ಪ ಹಿತ ನೀಡಬಹುದು. ಚಿಕ್ಕ ಚಿಕ್ಕ ಮನೆಮದ್ದುಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತದ ತೊಂದರೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಹಾಲಿನಲ್ಲಿ ಸ್ವಲ್ಪ ಅರಿಶಿನ ಹಾಕಿ ಕೊಟ್ಟರೆ ಗಂಟಲು ನೋವು ಮತ್ತು ಜ್ವರದಿಂದ ಸ್ವಲ್ಪ ಆರಾಮ ಸಿಗಬಹುದು.
ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ವಲ್ಪ ತಣ್ಣಗಾದ ಮೇಲೆ ಕೊಟ್ಟರೆ ಶೀತ ಕಡಿಮೆಯಾಗಲು ಸಹಕಾರಿ.
ಚಿಕ್ಕ ಮಕ್ಕಳಿಗೆ ಬೆಚ್ಚಗಿನ ನೀರಿನಿಂದ ಒಮ್ಮೆ ಒಮ್ಮೆ ಸ್ನಾನ ಮಾಡಿಸುವುದು ದೇಹವನ್ನು ರಿಲ್ಯಾಕ್ಸ್ ಮಾಡುತ್ತದೆ.
ಓಮ, ಲವಂಗ, ಬೆಳ್ಳುಳ್ಳಿಯನ್ನು ಚನ್ನಾಗಿ ಬಿಸಿ ಮಾಡಿ ಬಟ್ಟೆಯಲ್ಲಿ ಕಟ್ಟಿ ಮಗು ಮಲಗುವಾಗ ಪಕ್ಕದಲ್ಲಿ ಇಟ್ಟರೆ ಕಟ್ಟಿರುವ ಮೂಗು ಕಡಿಮೆಯಾಗಿ ಉಸಿರಾಡಲು ಸಹಕಾರಿ.
ಇದನ್ನೂ ಓದಿ:
ಇದಕ್ಕೆ ಜೊತೆಗೆ ಮಕ್ಕಳಿಗೆ ಬೆಚ್ಚಗಿನ ಸೂಪ್ ಅಥವಾ ದ್ರವ ಆಹಾರ ನೀಡಿದರೆ ದೇಹದಲ್ಲಿ ಶಕ್ತಿ ಉಳಿಯುತ್ತದೆ. ಆದರೆ ಜ್ವರ ಹೆಚ್ಚು ಇದ್ದರೆ ಅಥವಾ ಹೆಚ್ಚು ದಿನಗಳವರೆಗೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)



