ಆಯುರ್ವೇದದಲ್ಲಿ ವಿಶೇಷ ಸ್ಥಾನ ಪಡೆದಿರುವ ತುಳಸಿ ಎಲೆಗಳು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ರಾಸಾಯನಿಕ ಕ್ರೀಮ್ಗಳಿಗಿಂತಲೂ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದಾದ ಈ ನೈಸರ್ಗಿಕ ಫೇಸ್‌ಪ್ಯಾಕ್ ನಿಮ್ಮ ಮುಖಕ್ಕೆ ತಾಜಾತನ ಮತ್ತು ಹೊಳಪನ್ನು ನೀಡುತ್ತದೆ.
ಫೇಸ್‌ಪ್ಯಾಕ್ ತಯಾರಿಸುವ ವಿಧಾನ
ಮೊದಲು 8–10 ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಅವುಗಳನ್ನು ನುಣ್ಣಗೆ ಅರೆದು, ಒಂದು ಚಮಚ ಮೊಸರನ್ನು ಸೇರಿಸಿ ಮಿಶ್ರಣ ಮಾಡಬೇಕು. ಈ ಮಿಶ್ರಣವೇ ನಿಮ್ಮ ತುಳಸಿ ಫೇಸ್‌ಪ್ಯಾಕ್.
ಹೇಗೆ ಬಳಸಬೇಕು?
ಈ ಫೇಸ್‌ಪ್ಯಾಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಸಮವಾಗಿ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಇರಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಬಳಸುವ ಮೊದಲು ಚರ್ಮದ ಒಂದು ಭಾಗದಲ್ಲಿ ಪ್ಯಾಚ್ ಟೆಸ್ಟ್ ಮಾಡುವುದು ಉತ್ತಮ.
ಚರ್ಮಕ್ಕೆ ದೊರೆಯುವ ಪ್ರಯೋಜನಗಳು
ತುಳಸಿ ಮತ್ತು ಮೊಸರಿನ ಸಂಯೋಜನೆ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆಯುತ್ತದೆ.
ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಮೊಡವೆ, ಕಲೆ ಮತ್ತು ಅಸಮತೋಲನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕ.
ಚರ್ಮವನ್ನು ತಾಜಾ ಮತ್ತು ತಂಪಾಗಿ ಇಡುತ್ತದೆ.
ವಾರಕ್ಕೆ ಒಂದು ಅಥವಾ ಎರಡು ಬಾರಿ ಬಳಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.