Monday, December 29, 2025

Home Remedies | ಔಷಧಿಗಿಂತ ಮೊದಲು ಆಹಾರಕ್ಕೆ ಆದ್ಯತೆ ಕೊಡಿ: ರಕ್ತಹೀನತೆಗೂ ಇದೆ ಪರಿಹಾರ

ಸಾಮಾನ್ಯ ಕಾಯಿಲೆಗಳು ಬಂದಾಗ ವೈದ್ಯರ ಸಲಹೆ ಪಡೆದು ಕೆಲ ದಿನ ಔಷಧಿ ತೆಗೆದುಕೊಂಡರೆ ಪರಿಹಾರ ಸಿಗುತ್ತದೆ. ಆದರೆ ರಕ್ತಹೀನತೆ (Anemia) ವಿಷಯದಲ್ಲಿ ಅಷ್ಟು ಸುಲಭವಲ್ಲ. ಇದು ನಿಧಾನವಾಗಿ ದೇಹದ ಶಕ್ತಿಯನ್ನು ಕುಗ್ಗಿಸಿ, ದೌರ್ಬಲ್ಯ, ಉಸಿರಾಟದ ತೊಂದರೆ, ತಲೆಸುತ್ತು, ದಣಿವು ಎನ್ನುವ ಲಕ್ಷಣಗಳನ್ನು ಉಂಟುಮಾಡುತ್ತದೆ. ಮಾತ್ರೆಗೂ ಜೊತೆಗೆ ಸರಿಯಾದ ಆಹಾರ ಪದ್ಧತಿ ಪಾಲಿಸದಿದ್ದರೆ ರಕ್ತಹೀನತೆಯಿಂದ ಹೊರಬರುವುದು ಕಷ್ಟ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸಹಜವಾಗಿ ಹೆಚ್ಚಿಸಿಕೊಳ್ಳಲು ಈ ಆಹಾರ ಟಿಪ್ಸ್‌ಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ.

ರಕ್ತಹೀನತೆ ನಿವಾರಣೆಗೆ ಸಹಾಯಕ ಆಹಾರಗಳು:

  • ಕುಂಬಳಕಾಯಿ ಬೀಜ ಮತ್ತು ಎಳ್ಳು: ಕುಂಬಳಕಾಯಿ ಬೀಜ ಹಾಗೂ ಎಳ್ಳಿನಲ್ಲಿ ಕಬ್ಬಿಣ, ತಾಮ್ರ, ವಿಟಮಿನ್ B6 ಮತ್ತು ಪೋಲೆಟ್ ಸಮೃದ್ಧವಾಗಿವೆ. ಇವು ರಕ್ತ ಉತ್ಪಾದನೆಗೆ ಸಹಕಾರಿಯಾಗುತ್ತವೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
  • ನುಗ್ಗೆ ಸೊಪ್ಪು: ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶ ಹಾಗೂ ವಿಟಮಿನ್ C ಹೆಚ್ಚು. ಇದು ದೇಹದಲ್ಲಿ ಕಬ್ಬಿಣದ ಶೋಷಣೆಯನ್ನು ಹೆಚ್ಚಿಸುತ್ತದೆ. ಸಾರು, ಪಲ್ಯ ಅಥವಾ ಸೂಪ್ ನ ರೂಪದಲ್ಲಿ ಸೇವಿಸಬಹುದು.
  • ರಾಗಿ: ರಾಗಿ ಕಬ್ಬಿಣಾಂಶದಿಂದ ಸಮೃದ್ಧವಾದ ಧಾನ್ಯ. ರಾಗಿ ಮುದ್ದೆ, ರೊಟ್ಟಿ, ಗಂಜಿ ಅಥವಾ ದೋಸೆಯನ್ನು ಆಹಾರದಲ್ಲಿ ಸೇರಿಸಿದರೆ ಹಿಮೋಗ್ಲೋಬಿನ್ ಮಟ್ಟ ಹೆಚ್ಚಲು ಸಹಾಯವಾಗುತ್ತದೆ.
  • ಮೊಟ್ಟೆ ಮತ್ತು ಚಿಕನ್ ಲಿವರ್: ಇವುಗಳಲ್ಲಿ ವಿಟಮಿನ್ B12, ಪೋಲೆಟ್ ಹಾಗೂ ಕಬ್ಬಿಣ ಹೆಚ್ಚು ಇರುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸಲು ಪರಿಣಾಮಕಾರಿ.
  • ಪಾಲಕ್ ಸೊಪ್ಪು ಮತ್ತು ಇತರ ಪೋಷಕಾಂಶಗಳು: ಪಾಲಕ್ ಸೊಪ್ಪು, ಬೆಲ್ಲ, ಖರ್ಜೂರ, ಒಣದ್ರಾಕ್ಷಿ ಹಾಗೂ ಮೊಸರು ಸೇರಿಸಿಕೊಂಡರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
error: Content is protected !!