ಮುಖದ ಸೌಂದರ್ಯಕ್ಕೆ ಎಷ್ಟು ಕಾಳಜಿ ವಹಿಸುತ್ತೇವೋ, ಅಷ್ಟೇ ಪ್ರಾಮುಖ್ಯತೆಯನ್ನು ಕುತ್ತಿಗೆಯ ಚರ್ಮಕ್ಕೂ ಕೊಡಬೇಕು. ಆದರೆ ಧೂಳು, ಬೆವರು, ಸೂರ್ಯನ ಕಿರಣಗಳು, ಹಾರ್ಮೋನ್ ಅಸಮತೋಲನ ಹಾಗೂ ನಿರ್ಲಕ್ಷ್ಯದಿಂದಾಗಿ ಕುತ್ತಿಗೆಯ ಸುತ್ತ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಎಷ್ಟೇ ಚೆನ್ನಾಗಿ ತಯಾರಾಗಿ ಹೋದರೂ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಬೆಸ್ಟ್ ವಿಷಯ ಏನೆಂದರೆ, ಈ ಸಮಸ್ಯೆಗೆ ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ. ಮನೆಯಲ್ಲೇ ಸಿಗುವ ಸರಳ ಪದಾರ್ಥಗಳಿಂದಲೇ ಈ ಕಪ್ಪು ಕಲೆಗಳನ್ನು ನಿಧಾನವಾಗಿ ನಿವಾರಿಸಬಹುದು.
- ನಿಂಬೆರಸ ಮತ್ತು ಜೇನುತುಪ್ಪ: ನಿಂಬೆರಸದ ಕೆಲ ಹನಿಗಳೊಂದಿಗೆ ಜೇನುತುಪ್ಪ ಬೆರೆಸಿ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆಯಿರಿ. ಇದು ಚರ್ಮವನ್ನು ಬೆಳಗಿಸಿ ಮೃದುವಾಗಿಸುತ್ತದೆ.
- ಅಲೋವೆರಾ ಜೆಲ್: ಶುದ್ಧ ಅಲೋವೆರಾ ಜೆಲ್ ಅನ್ನು ಪ್ರತಿದಿನ ರಾತ್ರಿ ಕುತ್ತಿಗೆಗೆ ಮಸಾಜ್ ಮಾಡಿದರೆ ಕಪ್ಪು ಕಲೆಗಳು ಕಡಿಮೆಯಾಗುತ್ತವೆ.
- ಬೇಕಿಂಗ್ ಸೋಡಾ ಮತ್ತು ನೀರು: ಸ್ವಲ್ಪ ಬೇಕಿಂಗ್ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ಮಾಡಿ ಸೌಮ್ಯವಾಗಿ ಸ್ಕ್ರಬ್ ಮಾಡಿದರೆ ಡೆಡ್ ಸ್ಕಿನ್ ಹೊರ ಹೋಗುತ್ತದೆ.
- ಹಾಲು ಮತ್ತು ಅರಿಶಿನ: ಹಾಲಿಗೆ ಚಿಟಿಕೆ ಅರಿಶಿನ ಸೇರಿಸಿ ಹಚ್ಚಿದರೆ ಚರ್ಮದ ಬಣ್ಣ ಸಮಾನಗೊಳ್ಳುತ್ತದೆ.
- ಆಲೂಗಡ್ಡೆ ರಸ: ಆಲೂಗಡ್ಡೆ ರಸವನ್ನು ಕುತ್ತಿಗೆಗೆ ಹಚ್ಚುವುದು ನೈಸರ್ಗಿಕ ಬ್ಲೀಚ್‌ನಂತೆ ಕೆಲಸ ಮಾಡುತ್ತದೆ.
ಈ ಮನೆಮದ್ದುಗಳನ್ನು ವಾರಕ್ಕೆ 3–4 ಬಾರಿ ನಿಯಮಿತವಾಗಿ ಅನುಸರಿಸುವುದರ ಜೊತೆ ಕುತ್ತಿಗೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಂಡರೆ, ಕೆಲವೇ ವಾರಗಳಲ್ಲಿ ಕಪ್ಪು ಕಲೆಗಳ ವ್ಯತ್ಯಾಸವನ್ನು ನೀವು ಸ್ಪಷ್ಟವಾಗಿ ಕಾಣಬಹುದು.

