March 16, 2026
Monday, March 16, 2026
spot_img

Hope | ಕತ್ತಲೆಯ ನಂತರವೇ ಬೆಳಕು.. ಅಂತ್ಯದ ಹಾದಿಯಲ್ಲೇ ಇದೆ ಅದ್ಭುತಗಳ ಉದಯ!

ಜೀವನದಲ್ಲಿ ಕೆಲವೊಮ್ಮೆ ಸತತ ಸೋಲುಗಳು ಅಥವಾ ಎದುರಾಗುವ ಸಂಕಷ್ಟಗಳು ನಮ್ಮನ್ನು ಕಟ್ಟಿಹಾಕುತ್ತವೆ. ಇನ್ನು ಬದುಕಲು ದಾರಿಯೇ ಇಲ್ಲ, ಎಲ್ಲಾ ಮುಗಿದುಹೋಯಿತು ಎಂದು ಮನಸ್ಸು ಸೋತು ಸುಣ್ಣವಾದಾಗ, ಅನಿರೀಕ್ಷಿತವಾಗಿ ಒಂದು ಪವಾಡ ಅಥವಾ ಚಮತ್ಕಾರ ನಡೆಯುತ್ತದೆ.

ಯಾವುದೋ ರೂಪದಲ್ಲಿ ಬರುವ ಸಹಾಯ, ಒಂದು ಸಣ್ಣ ಆಶಾದಾಯಕ ಘಟನೆ ಅಥವಾ ಅಚಾನಕ್ ಆಗಿ ಸಿಗುವ ಅವಕಾಶ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ನೈಜ ಜೀವನದ ಇಂತಹ ಕ್ಷಣಗಳು ನಮಗೆ ಕಲಿಸುವುದು ಒಂದೇ.. ಸೋಲನ್ನು ಒಪ್ಪಿಕೊಳ್ಳುವ ಮುನ್ನ ಸ್ವಲ್ಪ ತಾಳ್ಮೆಯಿಂದಿರಿ, ಏಕೆಂದರೆ ವಿಧಿ ನಿಮಗಾಗಿ ಇನ್ನೊಂದು ಸುಂದರ ಅಧ್ಯಾಯವನ್ನು ಕಾಯ್ದಿರಿಸಿರಬಹುದು.

ಕತ್ತಲೆ ದಟ್ಟವಾದಷ್ಟೂ ಸೂರ್ಯೋದಯ ಹತ್ತಿರವಿದೆ ಎಂದರ್ಥ. ಎಲ್ಲವೂ ಮುಗಿಯಿತು ಎಂದು ಕಣ್ಣೀರಿಡುವ ಹೊತ್ತಲ್ಲೇ, ಬದುಕು ನಮಗೆ ತಿಳಿಯದಂತೆ ಹೊಸ ಹಾದಿಯನ್ನು ತೆರೆದಿಡುತ್ತದೆ. ಅದೇ ಜೀವನದ ನಿಜವಾದ ಚಮತ್ಕಾರ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !