March 17, 2026
Tuesday, March 17, 2026
spot_img

ಹಾರ್ಮುಜ್ ವಿವಾದ: ನಮಗೆ ಯಾರ ಹೆಲ್ಪ್ ಬೇಕಾಗಿಲ್ಲ, ಅಮೆರಿಕ ಏಕಾಂಗಿಯಾಗಿ ಹೋರಾಡುತ್ತೆ ಎಂದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿ ಭದ್ರತೆ ವಿಚಾರದಲ್ಲಿ ಮಿತ್ರ ರಾಷ್ಟ್ರಗಳ ನೆರವು ಅಗತ್ಯವಿಲ್ಲ ಎಂದು ಘೋಷಿಸಿದ್ದು, ಅಮೆರಿಕ ಏಕಾಂಗಿಯಾಗಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಹಾರ್ಮುಜ್ ನಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ.

ಹಿಂದಿನ ದಿನಗಳಲ್ಲಿ ಮಿತ್ರ ರಾಷ್ಟ್ರಗಳಿಗೆ ನೌಕಾಪಡೆ ಸಹಾಯ ಕೋರಿ ಮನವಿ ಮಾಡಿದರೂ, ಜರ್ಮನಿ, ಫ್ರಾನ್ಸ್, ಜಪಾನ್ ಸೇರಿದಂತೆ ಹಲವು ದೇಶಗಳು ನಿರಾಕರಿಸಿವೆ. ಕೆಲವರು ಯುದ್ಧ ವಿಸ್ತರಣೆ ಭಯ ವ್ಯಕ್ತಪಡಿಸಿದರೆ, ಇನ್ನೂ ಕೆಲವು ದೇಶಗಳು ರಾಜತಾಂತ್ರಿಕ ಪರಿಹಾರಕ್ಕೆ ಆದ್ಯತೆ ನೀಡಿವೆ.

ಇದನ್ನೂ ಓದಿ:

ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಅಮೆರಿಕ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿದ್ದು, ತನ್ನ ಸೈನ್ಯದಿಂದಲೇ ವಾಣಿಜ್ಯ ಹಡಗುಗಳನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದ್ದಾರೆ. ಜೊತೆಗೆ, NATO ರಾಷ್ಟ್ರಗಳು ಸಹಕರಿಸದಿದ್ದರೆ ಅದರ ಭವಿಷ್ಯಕ್ಕೂ ಪರಿಣಾಮ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಇರಾನ್ ಹಾರ್ಮುಜ್ ಮಾರ್ಗವನ್ನು ನಿರ್ಬಂಧಿಸಿರುವುದರಿಂದ ಜಾಗತಿಕ ತೈಲ ಸರಬರಾಜಿನ ಮೇಲೆ ಪರಿಣಾಮ ಬಿದ್ದಿದೆ. ಜಗತ್ತಿನ ಸುಮಾರು 20% ತೈಲ ಸಾಗಣೆ ಇದೇ ಮಾರ್ಗದಿಂದ ನಡೆಯುವುದರಿಂದ, ಬೆಲೆ ಏರಿಕೆ ಆತಂಕವೂ ಹೆಚ್ಚಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !