April 4, 2026
Saturday, April 4, 2026
spot_img

ಹೊಸ ಸಿಲಿಂಡರ್‌ ಜೋಡಣೆ ವೇಳೆ ಭೀಕರ ಅವಘಡ: ಇಡೀ ಮನೆಯೇ ಛಿದ್ರ ಛಿದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಡುಗೆ ಸಿಲಿಂಡರ್‌ ಸ್ಫೋಟದಿಂದಾಗಿ ಇಡೀ ಮನೆಯೇ ಸರ್ವನಾಶವಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ತಾಳೂರು ಗ್ರಾಮದಲ್ಲಿ ಸುಬಾನಿ ಸಾಬ್‌ ಎನ್ನುವವರ ಮನೆ ಧ್ವಂಸವಾಗಿದೆ.

ಹೊಸ ಸಿಲಿಂಡರ್‌ ಜೋಡಣೆ ವೇಳೆ ಗ್ಯಾಸ್‌ ಸೋರಿಕೆಯಾಗಿದ್ದು, ಗ್ಯಾಸ್‌ ಲೀಕ್‌ ಆಗಿ ಮನೆ ಛಿದ್ರವಾಗಿದೆ. ಗ್ಯಾಸ್‌ ವಾಸನೆ ಬರುತ್ತಿದ್ದಂತೆಯೇ ಕುಟುಂಬದ ಎಲ್ಲರೂ ಮನೆಯಿಂದ ಹೊರಗೆ ಬಂದಿದ್ದಾರೆ.

ಈ ಒಂದು ಕೆಲಸದಿಂದ ಇಡೀ ಮನೆಯವರ ಪ್ರಾಣ ಉಳಿದಿದೆ. ಸ್ಫೋಟದ ತೀವ್ರತೆಗೆ ಪಕ್ಕದ ಮನೆಯ ಗೋಡೆಯೂ ಕುಸಿದು ಬಿದ್ದಿದೆ. ಮನೆಯವರಿಗೆ ಸ್ಫೋಟದಿಂದ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !