March 10, 2026
Tuesday, March 10, 2026
spot_img

ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಭೀಕರ ಆಕ್ಸಿಡೆಂಟ್: ಬೈಕ್‌ಗೆ ಅಂಬುಲೆನ್ಸ್‌ ಡಿಕ್ಕಿ,ಇಬ್ಬರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಶಾಂತಿನಗರದ ಡಬಲ್ ರೋಡ್ ಸಂಗೀತ ಸಿಗ್ನಲ್ ಬಳಿ ನಿಂತಿದ್ದ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಅಂಬುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ರೆಡ್‌ ಸಿಗ್ನಲ್‌ ಇದ್ದ ಕಾರಣ ಸವಾರ ಬೈಕ್‌ ನಿಲ್ಲಿಸಿದ್ದರು. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್‌ ಹಿಂದಿನಿಂದ ಬೈಕ್‌ಗೆ ಗುದ್ದಿದೆ. ಬೈಕ್‌ ಸಮೇತ 200 ಮೀಟರ್‌ ಎಳೆದೊಯ್ದಿದೆ. ಕೊನೆಗೆ ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಡ್ರೋಲ್ ಯುನಿಟ್‌ಗೆ ಗುದ್ದಿ ಅಂಬುಲೆನ್ಸ್‌ ನಿಂತಿದೆ.

ಅಪಘಾತದಲ್ಲಿ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಿಂದ ಅಪಘಾತವಾಗಿದೆ. ಅಂಬುಲೆನ್ಸ್ ಒಳಗೆ ಯಾರೂ ರೋಗಿ ಇರಲಿಲ್ಲ. ಆದರೂ, ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೇ ಅಪಘಾತವೆಸಗಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !