January21, 2026
Wednesday, January 21, 2026
spot_img

ಪಹಲ್ಗಾಮ್ ಗೆ ಪಾಕ್ ಉಗ್ರರು ಹೇಗೆ ಬಂದರು?: ಕೇಂದ್ರ ಸರಕಾರಕ್ಕೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ ಇಂದು ಆಪರೇಷನ್ ಸಿಂದೂರ್ ಕುರಿತ ಚರ್ಚೆ ನಡೆಯುತ್ತಿದ್ದು, ಈ ವೇಳೆ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ , ಪಹಲ್ಗಾಮ್ ಗೆ ಉಗ್ರರು ಹೇಗೆ ಬಂದರು ಎಂಬುದರ ಬಗ್ಗೆ ರಕ್ಷಣಾ ಸಚಿವರು ಏನನ್ನೂ ಹೇಳುತ್ತಿಲ್ಲ ಎಂದು ಆರೋಪಿಸಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಕಷ್ಟು ಮಾಹಿತಿ ನೀಡಿದ್ದಾರೆ. ಆದರೆ ರಕ್ಷಣಾ ಸಚಿವರಾಗಿ ಉಗ್ರರು ಪಾಕಿಸ್ತಾನದಿಂದ ಹೇಗೆ ಪಹಲ್ಗಾಮ್ ಗೆ ಬಂದರು ಎಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ. ರಾಷ್ಟ್ರದ ಹಿತದೃಷ್ಟಿಂದ ಇದರ ಬಗ್ಗೆ ಪ್ರಶ್ನಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಪ್ರತಿಪಕ್ಷಗಳು ಸೇರಿದಂತೆ ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತಿತ್ತು. ಆದಾಗ್ಯೂ ಇದಕ್ಕಿದ್ದಂತೆ ಮೇ 10 ರಂದು ಜಾರಿಯಾದ ಕದನ ವಿರಾಮ ಜಾರಿ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿದೆ. ಪಾಕಿಸ್ತಾನ ಮುಂಡಿಯೂರು ಸಿದ್ಧ ಆಗಿದ್ರೆ ಸೇನಾ ಕಾರ್ಯಾಚರಣೆ ಯಾಕೆ ನಿಲ್ಲಿಸಿದ್ದೀರಿ, ಯಾರಿಗೆ ಶರಣಾಗಿದ್ದೀರಿ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕಾಗಿದೆ ಎಂದರು.

ಕದನ ವಿರಾಮ ಜಾರಿಗೆ ಭಾರತ ಮತ್ತು ಪಾಕಿಸ್ತಾನ ಒತ್ತಾಯಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 26 ಬಾರಿ ಹೇಳಿದ್ದಾರೆ. ನಮ್ಮ ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬುದರ ಬಗ್ಗೆ ರಕ್ಷಣಾ ಸಚಿವರು ಮಾಹಿತಿ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.

ಕೇವಲ ಜನರಿಗಾಗಿ ಮಾತ್ರ ಇದನ್ನು ನಾವು ಕೇಳುತ್ತಿಲ್ಲ. ನಮ್ಮ ಯೋಧರಿಗಾಗಿಯೂ ಕೇಳುತ್ತಿದ್ದೇವೆ. ಏಕೆಂದರೆ ಅವರಿಗೂ ಸುಳ್ಳು ಹೇಳಲಾಗುತ್ತಿದೆ ಎಂದು ಗೊಗೊಯ್ ಆರೋಪಿಸಿದರು.

Must Read