February 25, 2026
Wednesday, February 25, 2026
spot_img

Rice series 38 | ಪ್ರೋಟೀನ್ ಭರಿತ ಬ್ರೇಕ್ ಫಾಸ್ಟ್ ಇದ್ರೆ ಎಷ್ಟು ಒಳ್ಳೆದು ಅಲ್ವಾ? ಅದಕ್ಕೆ ಸೋಯಾ ಬಿರಿಯಾನಿ ಟ್ರೈ ಮಾಡಿ

ಸಸ್ಯಾಹಾರಿಗಳಿಗೂ ಪ್ರೋಟೀನ್‌ ಸಮೃದ್ಧವಾದ, ರುಚಿಕರ ಹಾಗೂ ಸುಲಭವಾಗಿ ತಯಾರಿಸಿ ತಿನ್ನಬಹುದಾದ ಒಂದು ಸೂಪರ್ ಡಿಶ್ ಎಂದರೆ ಸೋಯಾ ಬಿರಿಯಾನಿ. ಸಾಮಾನ್ಯ ಬಿರಿಯಾನಿಗಿಂತ ಇದು ಲೈಟ್ ಆಗಿ, ಆರೋಗ್ಯಕರವಾಗಿಯೂ ಇರುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಉತ್ತಮ ಆಯ್ಕೆಯೂ ಹೌದು.

ಬೇಕಾಗುವ ಸಾಮಗ್ರಿಗಳು:

ಅಕ್ಕಿ – 1 ಕಪ್
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 2 (ಸ್ಲೈಸ್)
ಟೊಮೇಟೊ – 1 (ಚೂರು)
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಪುದೀನಾ ಮತ್ತು ಕೊತ್ತಂಬರಿ – ಸ್ವಲ್ಪ
ಬಿರಿಯಾನಿ ಮಸಾಲಾ – 1 ಟೇಬಲ್ಸ್‌ಪೂನ್
ಅರಿಶಿನ – ¼ ಟೀಸ್ಪೂನ್
ಲವಂಗ, ದಾಲ್ಚಿನ್ನಿ, ಏಲಕ್ಕಿ – ತಲಾ 2
ಎಣ್ಣೆ ಅಥವಾ ತುಪ್ಪ – 2 ಟೇಬಲ್ಸ್‌ಪೂನ್
ಉಪ್ಪು – ರುಚಿಗೆ
ನೀರು – 2 ಕಪ್

ಮಾಡುವ ವಿಧಾನ:

ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸೋಯಾ ಚಂಕ್ಸ್ 10 ನಿಮಿಷ ನೆನೆಸಿ. ನಂತರ ಒತ್ತಿ ನೀರು ತೆಗೆದುಬಿಡಿ.

ಈಗ ಒಂದು ಪ್ಯಾನ್‌ನಲ್ಲಿ ಎಣ್ಣೆ/ತುಪ್ಪ ಹಾಕಿ, ಲವಂಗ, ಏಲಕ್ಕಿ, ದಾಲ್ಚಿನ್ನಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ, ಹಸಿಮೆಣಸು, ಅರಿಶಿನ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಬೇಯಿಸಿ. ಈಗ ನೆನೆಸಿದ ಸೋಯಾ ಚಂಕ್ಸ್ ಹಾಗೂ ಪುದೀನಾ-ಕೊತ್ತಂಬರಿ ಸೇರಿಸಿ 2–3 ನಿಮಿಷ ಫ್ರೈ ಮಾಡಿ.

ತೊಳೆದ ಅಕ್ಕಿ ಮತ್ತು ನೀರು ಹಾಕಿ ಉಪ್ಪು ಸೇರಿಸಿ. ಮುಚ್ಚಿ 10–12 ನಿಮಿಷ ಮಾಧ್ಯಮ ಉರಿಯಲ್ಲಿ ಬೇಯಿಸಿದರೆ ಸೋಯಾ ಬಿರಿಯಾನಿ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !