Monday, December 29, 2025

ಡಿಸೆಂಬರ್‌ 31ರಂದು ಎಷ್ಟು ಹೊತ್ತು ಇರಲಿದೆ ನಮ್ಮ ಮೆಟ್ರೋ? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಟ್ರೋ ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ ನೀಡಿದೆ.  ಹೊಸ ವರ್ಷ ಆಚರಣೆ ಮಾಡುವ ಜನರ ಅನುಕೂಲಕ್ಕಾಗಿ ಮಧ್ಯರಾತ್ರಿಯವರೆಗೂ ಮೆಟ್ರೋ ರೈಲುಗಳನ್ನು ಓಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದರಿಂದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ವಿವಿಧೆಡೆ ಹೊಸ ವರ್ಷ ಆಚರಣೆ ಮಾಡುವವರು, ಮಧ್ಯರಾತ್ರಿಯೂ ತಮ್ಮ ಮನೆಗೇ ಸೇಫಾಗಿ ತಲುಪಲು ಸಾಧ್ಯ. ಯಾವ್ಯಾವ ಮಾರ್ಗಗಳಲ್ಲಿ ಮೆಟ್ರೋ ಸೇವೆಯ ಸಮಯ ವಿಸ್ತರಣೆಯಾಗಿದೆ ಎಂಬ ವಿವರ ಇಲ್ಲಿದೆ ಓದಿ..

31 ಡಿಸೆಂಬರ್ 2025 (ಮಂಗಳವಾರ) ರಾತ್ರಿ & 1 ಜನವರಿ 2026 (ಬುಧವಾರ) ಬೆಳಗ್ಗೆ ವಿಶೇಷ ವೇಳಾಪಟ್ಟಿ ಇಂತಿದೆ..

ನೇರಳೆ ಮಾರ್ಗ : ಬೈಯಪ್ಪನಹಳ್ಳಿ → ಕೆಂಗೇರಿ‌ ಕೊನೆಯ ರೈಲು : ರಾತ್ರಿ 1:45 ಗಂಟೆ, ಕೆಂಗೇರಿ → ಬೈಯಪ್ಪನಹಳ್ಳಿ ರೈಲು ರಾತ್ರಿ 2 ಗಂಟೆ

ಹಸಿರು ಮಾರ್ಗ: ಮೆಜೆಸ್ಟಿಕ್‌ → ನಾಗಸಂದ್ರ ಕೊನೆಯ ರೈಲು ರಾತ್ರಿ 2 ಗಂಟೆ, ನಾಗಸಂದ್ರ → ಮೆಜೇಸ್ಟಿಕ್ ಕೊನೆಯ ರೈಲು ರಾತ್ರಿ 2 ಗಂಟೆ

ಹಳದಿ ಮಾರ್ಗ: ಆರ್‌ವಿ ರಸ್ತೆ → ಬೊಮ್ಮಸಂದ್ರ ಕೊನೆಯ ರೈಲು ರಾತ್ರಿ 3:10 ಗಂಟೆ, ಬೊಮ್ಮಸಂದ್ರ → ಆರ್‌ವಿ ರಸ್ತೆ‌ ಕೊನೆಯ ರೈಲು ರಾತ್ರಿ 1:30 ಗಂಟೆ ಕೊನೆಯ ಮೆಟ್ರೋ ರೈಲುಗಳು ರಾತ್ರಿ 2:45ರ ತನಕ ಕಾರ್ಯಾಚರಣೆ

1 ಜನವರಿ 2026ರಂದು ಬೆಳಗ್ಗೆ 11:30ರವರೆಗೆ ವಿಶೇಷ ಸೇವೆ ಲಭ್ಯವಿದೆ. ಇನ್ನು ಡಿಸೆಂಬರ್ 31ರಾತ್ರಿ ಎಂಜಿ ರೋಡ್ ಮೆಟ್ರೋ ನಿಲ್ದಾಣ ಬಂದ್ ಆಗಿರಲಿದೆ. ರಾತ್ರಿ 10ಗಂಟೆಯಿಂದ ಎಂಟ್ರಿ ಅಂಡ್ ಎಕ್ಸಿಟ್‌ ಬಂದ್ ಆಗಲಿದೆ. ಎಂಜಿ ರೋಡ್‌ ಸ್ಟಾಪ್‌ನಲ್ಲಿ ಅತಿಯಾದ ಜನದಟ್ಟಣೆ ಇರುವ ಕಾರಣ ಸ್ಟೇಷನ್‌ ಕ್ಲೋಸ್‌ ಮಾಡಲಾಗಿದೆ.

error: Content is protected !!