ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದು, 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿವೆ .
ಕೇಂದ್ರ ಬಜೆಟ್ನಲ್ಲಿ ಪ್ರಮುಖ ಇಲಾಖೆಗಳಿಗೆ ಸಿಕ್ಕಿದ ಅನುದಾನದ ಮಾಹಿತಿ ಇಲ್ಲಿದೆ.
- ಸಾರಿಗೆ ಇಲಾಖೆ- 5,98,520 ಕೋಟಿ ರೂ.
- ರಕ್ಷಣಾ ಇಲಾಖೆ 5,94,585 ಕೋಟಿ ರೂ.
- ಗ್ರಾಮೀಣಾಭಿವೃದ್ಧಿ ಇಲಾಖೆ- 2,73,108 ಕೋಟಿ ರೂ.
- ಗೃಹ ವ್ಯವಹಾರಗಳ ಇಲಾಖೆ- 2,55,234 ಕೋಟಿ ರೂ.
- ಕೃಷಿ ಇಲಾಖೆ- 1,62,671 ಕೋಟಿ ರೂ.
- ಶಿಕ್ಷಣ ಇಲಾಖೆ- 1,39,289 ಕೋಟಿ ರೂ.
- ಆರೋಗ್ಯ ಇಲಾಖೆ- 1,04,599 ಕೋಟಿ ರೂ.
- ಇಂಧನ ಇಲಾಖೆ- 1,09,029 ಕೋಟಿ ರೂ.
- ನಗರಾಭಿವೃದ್ಧಿ ಇಲಾಖೆ- 85,522 ಕೋಟಿ ರೂ.
- ಐಟಿ ಮತ್ತು ಟೆಲಿಕಾಂ- 74,560 ಕೋಟಿ ರೂ.
- ವಾಣಿಜ್ಯ ಮತ್ತು ಕೈಗಾರಿಕೆ- 70,296 ಕೋಟಿ ರೂ.
- ಸಮಾಜಕಲ್ಯಾಣ ಇಲಾಖೆ- $62,362 ಕೋಟಿ ರೂ.
- ವೈಜ್ಞಾನಿಕ ಇಲಾಖೆ- 55,756 ಕೋಟಿ ರೂ.
- ತೆರಿಗೆ ಆಡಳಿತ- 45,500 ಕೋಟಿ ರೂ.
- ವಿದೇಶಾಂಗ ವ್ಯವಹಾರ ಇಲಾಖೆ- 22,119 ಕೋಟಿ ರೂ.
- ಹಣಕಾಸು ಇಲಾಖೆ- 20,649 ಕೋಟಿ ರೂ.
- ಈಶಾನ್ಯ ರಾಜ್ಯಗಳ ಅಭಿವೃದ್ಧಿ- 6,812 ಕೋಟಿ ರೂ.



