January19, 2026
Monday, January 19, 2026
spot_img

ಬಿಗ್‌ಬಾಸ್‌ ವಿನ್ನರ್‌ಗೆ ಸಿಗೋ ಹಣ ಎಷ್ಟು? ಕಟ್ಟೋ ಟ್ಯಾಕ್ಸ್‌ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಬಿಗ್ ಬಾಸ್ ಕನ್ನಡ ಸೀಸನ್ 12’ ಅನ್ನು ಗಿಲ್ಲಿ ವಿನ್ನರ್ ಆಗಿದ್ದಾರೆ. ಗೆಲುವಿನ ಬಗ್ಗೆ ಫ್ಯಾನ್ಸ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಗಿಲ್ಲಿಗೆ ಬಹುಮಾನ ಮೊತ್ತವಾಗಿ 50 ಲಕ್ಷ ರೂಪಾಯಿ ಸಿಕ್ಕಿದೆ.

ಇದರ ಜೊತೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಸಿಕ್ಕಿದೆ. ಸುದೀಪ್ 10 ಲಕ್ಷ ರೂಪಾಯಿ ಘೋಷಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಇದರಲ್ಲಿ ಸಂಪೂರ್ಣ ಮೊತ್ತ ಅವರಿಗೆ ಸಿಗೋದಿಲ್ಲ. ಬಿಗ್ ಬಾಸ್ ಅಲ್ಲಿ ಸ್ಪರ್ಧಿಸಿದರೆ ಸಾಕಷ್ಟು ಜನಪ್ರಿಯತೆ ಸಿಗುತ್ತದೆ. ಅದರಲ್ಲೂ ಗೆದ್ದವರಿಗೆ 50 ಲಕ್ಷ ರೂಪಾಯಿ ಸಿಗುತ್ತದೆ ಎಂದುಕೊಂಡಿರುತ್ತಾರೆ. ಆದರೆ ಗೆದ್ದ ವ್ಯಕ್ತಿಗೆ ಸಂಪೂರ್ಣ ಹಣ ಸಿಗುವುದಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಬಿಗ್ ಬಾಸ್ ಪ್ರೈಜ್ ಮೊತ್ತಕ್ಕೆ ಸರ್ಕಾರ ದೊಡ್ಡ ಮೊತ್ತದ ಟ್ಯಾಕ್ಸ್ ಹೇರುತ್ತದೆ. ಆ ಮೊತ್ತ ಕೇಳಿದರೆ ಯಾರಿಗಾದರೂ ಅಚ್ಚರಿ ಆಗುತ್ತದೆ.

ಮನರಂಜನೆ ಕ್ಷೇತ್ರದಲ್ಲಿ ಸಿಗೋ ಬಹುಮಾನ ಮೊತ್ತಕ್ಕೆ ಸರ್ಕಾರ ಬರೋಬ್ಬರಿ ಶೇ. 30ರಷ್ಟು ಟ್ಯಾಕ್ಸ್ ವಿಧಿಸುತ್ತದೆ. ಬರುವ ಒಟ್ಟು ಹಣದಲ್ಲಿ ಶೇ. 30ರಷ್ಟು ಹಣ ಸರ್ಕಾರಕ್ಕೆ ಟ್ಯಾಕ್ಸ್ ರೂಪದಲ್ಲಿ ಹೋಗುತ್ತದೆ. ಈ ಟ್ಯಾಕ್ಸ್ ಮೊತ್ತವನ್ನು ಸಂಸ್ಥೆಯವರು ಕಡಿತ ಮಾಡಿಯೇ ವಿಜೇತರಿಗೆ ನೀಡುತ್ತಾರೆ. ಹೀಗಾಗಿ ಗಿಲ್ಲಿಗೆ ಈ ಹಣದಲ್ಲಿ ಸಿಗೋದು ಕೇವಲ 35 ಲಕ್ಷ ರೂಪಾಯಿ. ಗಿಲ್ಲಿಗೆ ಸುದೀಪ್ ಘೋಷಿಸಿರೋ 10 ಲಕ್ಷಕ್ಕೂ ಈ ಟ್ಯಾಕ್ಸ್ ಅನ್ವಯ ಆಗುತ್ತದೆಯೇ ಎಂಬ ಸ್ಪಷ್ಟನೆ ಇಲ್ಲ.

ರಿಯಾಲಿಟಿ ಶೋ, ಲಾಟರಿ, ಸ್ಪರ್ಧೆ, ಕಾರ್ಡ್​ ಗೇಮ್​ನಲ್ಲಿ ಆಡಿ ಗೆದ್ದಲ್ಲಿ ಶೇ. 30 ತೆರಿಗೆ ಪಾವತಿಸಬೇಕು. ಕನಿಷ್ಠ 10 ಸಾವಿರ ರೂಪಾಯಿ ಇಂದ ಈ ತೆರಿಗೆ ಅನ್ವಯ ಆಗುತ್ತದೆ. ಅಂದರೆ ನೀವು ಮನರಂಜನಾ ಕ್ಷೇತ್ರದಲ್ಲಿ 10 ಸಾವಿರ ಬಹುಮಾನ ಗೆದ್ದರೆ ಮೂರು ಸಾವಿರ ಕಟ್ ಆಗಿ, 7 ಸಾವಿರ ಮಾತ್ರ ಕೈ ಸೇರುತ್ತದೆ.

Must Read

error: Content is protected !!