ಆರೋಗ್ಯ ತಜ್ಞರು ಬೆಡ್‌ಶೀಟ್‌ಗಳು ಹಾಗೂ ದಿಂಬಿನ ಹೊದಿಕೆಗಳನ್ನು ವಾರಕ್ಕೊಮ್ಮೆಯಾದರೂ ತೊಳೆಯಲು ಶಿಫಾರಸು ಮಾಡುತ್ತಾರೆ. ಇವುಗಳನ್ನು ಆಗಾಗ್ಗೆ ಬಿಸಿಲಿನಲ್ಲಿ ಒಣಗಿಸಬೇಕು.
ಕೆಲವು ಚರ್ಮ ರೋಗಗಳು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಜನರು ತಮ್ಮ ಬೆಡ್‌ಶೀಟ್‌ಗಳು ಮತ್ತು ದಿಂಬಿನ ಹೊದಿಕೆಗಳನ್ನು ನಿಯಮಿತವಾಗಿ ಬದಲಾಯಿಸಬೇಕು.
ಇತರರು ಬಳಸುವ ಅದೇ ಹೊದಿಕೆಗಳನ್ನು ಬಳಸುವ ಬದಲು ಅವುಗಳನ್ನು ಪ್ರತ್ಯೇಕವಾಗಿ ಬಳಸುವುದು ಉತ್ತಮ.
ಅಲರ್ಜಿ ಇರುವವರು ಅಲರ್ಜಿ ವಿರೋಧಿ ಬೆಡ್‌ಶೀಟ್‌ಗಳು, ದಿಂಬಿನ ಹೊದಿಕೆಗಳನ್ನು ಬಳಸುವುದು ಒಳ್ಳೆಯದು.
ಅನೇಕರು ತಮ್ಮ ಸಾಕುಪ್ರಾಣಿಗಳನ್ನು ಹಾಸಿಗೆಗೆ ತಂದು ತಮ್ಮ ಪಕ್ಕದಲ್ಲಿ ಮಲಗಿಸುತ್ತಾರೆ. ಇದು ಅವರ ಕೂದಲು, ಚರ್ಮದ ಮೇಲೆ ಬ್ಯಾಕ್ಟೀರಿಯಾ ಮತ್ತು ಬೆಡ್‌ಶೀಟ್‌ಗಳ ಮೇಲಿನ ಇತರ ಬ್ಯಾಕ್ಟೀರಿಯಾಗಳು ಹೆಚ್ಚಿಸುವ ಅಪಾಯಕ್ಕೆ ಸಿಲುಕಿಸುತ್ತದೆ.
ಪ್ರಾಣಿಗಳನ್ನು ಸಾಧ್ಯವಾದಷ್ಟು ಹಾಸಿಗೆಯಿಂದ ದೂರವಿಡುವುದು ಒಳ್ಳೆಯದು. ಪ್ರಾಣಿಗಳನ್ನು ಹಾಸಿಗೆಗೆ ತಂದರೂ ಕೂಡ ಪ್ರತಿ ಎರಡು ದಿನಗಳಿಗೊಮ್ಮೆ ಅದನ್ನು ಬದಲಾಯಿಸುವುದು ಅಗತ್ಯ.

