Sunday, November 2, 2025

TECH | ಡಿಜಿಟಲ್‌ ಫುಟ್‌ಪ್ರಿಂಟ್ಸ್‌ ಅಳಿಸೋದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಪ್ರತಿ ಹುಡುಕಾಟ, ಸ್ಕ್ರೋಲ್ ಮತ್ತು ಕ್ಲಿಕ್ ಕೂಡ ನಮ್ಮ ವೈಯಕ್ತಿಕ ಮಾಹಿತಿಯ ಹಾದಿಯನ್ನು ಬಿಟ್ಟುಕೊಡುವ ಈ ಡಿಜಿಟಲ್ ಯುಗದಲ್ಲಿ, “ಪೂರ್ಣವಾಗಿ ಆಫ್‌ಲೈನ್ ಆಗಿ ಬದುಕುವುದು ಹೇಗಿರಬಹುದು?” ಎಂಬ ಪ್ರಶ್ನೆ ಅನೇಕ ಬಾರಿ ಮನಸ್ಸಿನಲ್ಲಿ ಮೂಡುತ್ತದೆ. ಸಂಪೂರ್ಣವಾಗಿ ಡಿಜಿಟಲ್ ಹುಡುಕಾಟಗಳನ್ನು (digital footprint) ಅಳಿಸಬಹುದು. ಅದರ ವಿಧಾನ ಹೀಗಿದೆ ನೋಡಿ..

ನಿಮ್ಮ digital footprint ಅಳಿಸಿ:

ಮೊದಲ ಹೆಜ್ಜೆಯಾಗಿ Google activity ಕ್ಲೀನ್ ಮಾಡುವುದು ಅಗತ್ಯ. ಅದಕ್ಕಾಗಿ myactivity.google. comಗೆ ಹೋಗಿ ನಿಮ್ಮ ಖಾತೆಯಲ್ಲಿ ಸೈನ್ ಇನ್ ಆಗಿ. ಇಲ್ಲಿ ನೀವು Google ನ ಎಲ್ಲ ಸೇವೆಗಳಾದ Maps, YouTube, ಮತ್ತು ಚಿತ್ರ ಹುಡುಕಾಟಗಳ ಇತಿಹಾಸವನ್ನು ಕಾಣಬಹುದು.

ಎಡಭಾಗದ “Delete activity by” ಆಯ್ಕೆ ಮಾಡಿ, “All Time” ಆಯ್ಕೆಮಾಡಿ, ನಂತರ ನೀವು ಅಳಿಸಬೇಕಾದ ಅಪ್ಲಿಕೇಶನ್‌ಗಳನ್ನು ಟಿಕ್ ಮಾಡಿ. ಈ ಕ್ರಮವು ನಿಮ್ಮ Google ಸೇವೆಗಳಲ್ಲಿನ ಎಲ್ಲ ಹಳೆಯ ಹುಡುಕಾಟಗಳನ್ನು ಅಳಿಸಲು ಸಹಾಯಕ.

Go invisible:

ಮುಂದಿನ ಹಂತದಲ್ಲಿ, ನಿಮ್ಮ ಭವಿಷ್ಯದ ಹುಡುಕಾಟ ಮತ್ತು ಬ್ರೌಸಿಂಗ್ ಚಟುವಟಿಕೆಗಳು ಸಂಗ್ರಹವಾಗದಂತೆ ಮಾಡಬೇಕು. ಅದಕ್ಕಾಗಿ “Activity Controls” ವಿಭಾಗಕ್ಕೆ ಹೋಗಿ Web & App Activity, Location History ಮತ್ತು YouTube History ಆಯ್ಕೆಗಳನ್ನು ಆಫ್ ಮಾಡಿ. ಇದರಿಂದ Google ನಿಮ್ಮ ಸ್ಥಳ, ಹುಡುಕಾಟ ಮತ್ತು ವೀಕ್ಷಣೆ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದನ್ನು ನಿಲ್ಲಿಸುತ್ತದೆ.

ಖಾಸಗಿತನ ಕಾಪಾಡಿ:

ಹಳೆಯ ಮಾಹಿತಿಯನ್ನು ಅಳಿಸಿದ ಬಳಿಕ, ಹೊಸ ಮಾಹಿತಿ ಸಂಗ್ರಹವಾಗದಂತೆ ತಡೆಯಬೇಕು. ಅದಕ್ಕಾಗಿ Google ಖಾತೆಯ Data & Privacy ವಿಭಾಗಕ್ಕೆ ಹೋಗಿ ಎಲ್ಲಾ “Activity Tracking” ಆಯ್ಕೆಗಳನ್ನು ಆಫ್ ಮಾಡಿ. ಇದರಿಂದ ನಿಮ್ಮ ಸ್ಥಳ ಮಾಹಿತಿ, ವೆಬ್ ಬಳಕೆ ಹಾಗೂ ಯೂಟ್ಯೂಬ್ ಇತಿಹಾಸ ಸಂಗ್ರಹವಾಗುವುದಿಲ್ಲ.

ಸ್ವಯಂಚಾಲಿತ ಗೌಪ್ಯತೆ (Automate Privacy):

ಪ್ರತಿ ಕೆಲವು ತಿಂಗಳಿಗೊಮ್ಮೆ ಇದೇ ಕ್ರಮವನ್ನು ಪುನರಾವರ್ತಿಸಬೇಕೆಂದು ಯೋಚಿಸುವ ಅಗತ್ಯವಿಲ್ಲ. Google ಈಗ “Auto-delete” ಆಯ್ಕೆಯನ್ನು ನೀಡುತ್ತದೆ. myactivity.google.com/auto-deleteಗೆ ತೆರಳಿ, Web & App Activity, Timeline ಅಥವಾ YouTube History ವಿಭಾಗವನ್ನು ಆಯ್ಕೆ ಮಾಡಿ. ನಂತರ 3 ತಿಂಗಳು, 18 ತಿಂಗಳು ಅಥವಾ 36 ತಿಂಗಳಿಗಿಂತ ಹಳೆಯ ಮಾಹಿತಿಯನ್ನು ಸ್ವಯಂಚಾಲಿತವಾಗಿ ಅಳಿಸಲು ಆಯ್ಕೆಮಾಡಬಹುದು. ಇದು ನಿಮ್ಮ ಖಾತೆಯನ್ನು ನಿರಂತರವಾಗಿ ಕ್ಲೀನ್ ಮಾಡುತ್ತದೆ.

ಸುರಕ್ಷಿತ ಸಂಪರ್ಕವನ್ನು ಬಳಸಿರಿ:

ಖಾತೆಯನ್ನು ಕ್ಲೀನ್ ಮಾಡಿದರೂ, ಸಂಪರ್ಕ ಸುರಕ್ಷಿತವಾಗಿರದಿದ್ದರೆ ಪ್ರಯೋಜನ ಕಡಿಮೆ. ಇದಕ್ಕಾಗಿ VPN (Virtual Private Network) ಮತ್ತು ಗೌಪ್ಯತೆ ಕೇಂದ್ರೀಕೃತ ಬ್ರೌಸರ್ ಅಥವಾ ಸರ್ಚ್ ಎಂಜಿನ್ ಬಳಸಿ. DuckDuckGo, Brave Search, ಅಥವಾ Startpage ಸರ್ಚ್ ಎಂಜಿನ್‌ಗಳನ್ನು ಬಳಸಬಹುದು. ಬ್ರೌಸರ್‌ಗಳಲ್ಲಿ DuckDuckGo Browser, Tor Browser ಅಥವಾ Firefox (Privacy Mode ನಲ್ಲಿ) ಸುರಕ್ಷಿತ ಆಯ್ಕೆಗಳು. ಜೊತೆಗೆ, ಪ್ರತಿ 3 ರಿಂದ 6 ತಿಂಗಳಿಗೆ ಪಾಸ್‌ವರ್ಡ್ ಬದಲಾಯಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ.

error: Content is protected !!