ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ವಿಶೇಷವಾಗಿ ಹಣ ಇರುವವರನ್ನೇ ಸ್ಕ್ಯಾಮರ್‌ಗಳು ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಡಿಜಿಟಲ್ ಯುಗದಲ್ಲಿ ಎಚ್ಚರಿಕೆ ವಹಿಸುವ ಮಹತ್ವವನ್ನು ನಮಗೆ ತೋರಿಸುತ್ತವೆ.
ವೈಯಕ್ತಿಕ ಮಾಹಿತಿಯ ಸುರಕ್ಷತೆ
ಪ್ರತಿಯೊಬ್ಬರ ಫೋನ್ ವೈಯಕ್ತಿಕ ಮಾಹಿತಿಯ ಭಂಡಾರವಾಗಿದೆ. ಸೈಬರ್ ಬೆದರಿಕೆಗಳು ದಿನನಿತ್ಯ ಹೆಚ್ಚುತ್ತಿವೆ, ಹೀಗಾಗಿ ಫೋನ್ ಮತ್ತು ಡಿಜಿಟಲ್ ಖಾತೆಗಳನ್ನು ಸುರಕ್ಷಿತವಾಗಿಡುವುದು ಅತ್ಯಂತ ಮುಖ್ಯ. ಬಲವಾದ ಪಾಸ್‌ವರ್ಡ್‌ಗಳು, ಎಚ್ಚರಿಕೆಯಿಂದ ಆಪ್ ಸೆಟ್ಟಿಂಗ್‌ಗಳನ್ನು ಪರಿಗಣಿಸುವುದು ಹಾಗೂ ಎಚ್ಚರಿಕೆಯ ಇಂಟರ್ನೆಟ್ ಬ್ರೌಸಿಂಗ್, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು ನೆರವಾಗುತ್ತವೆ.

ಬಲವಾದ ಪಾಸ್‌ವರ್ಡ್ ಮತ್ತು ಬಯೋಮೆಟ್ರಿಕ್ ಲಾಕ್
ಫೋನ್ ಅನ್ನು ಸುರಕ್ಷಿತಗೊಳಿಸಲು ಪಾಸ್‌ವರ್ಡ್ ಕಂಪ್ರೆಕ್ಸ್, ಅಕ್ಷರ, ಸಂಖ್ಯೆ ಮತ್ತು ವಿಶೇಷ ಅಕ್ಷರಗಳ ಸಂಯೋಜನೆಯಾಗಿರಬೇಕು. ಫಿಂಗರ್‌ಪ್ರಿಂಟ್ ಅಥವಾ ಮುಖ ಗುರುತಿಸುವಿಕೆಯಂತಹ ವೈಶಿಷ್ಟ್ಯಗಳನ್ನು ಬಳಸಿದರೆ ಭದ್ರತೆ ಇನ್ನೂ ಹೆಚ್ಚುತ್ತದೆ.
ಸಾಫ್ಟ್‌ವೇರ್ ನವೀಕರಣ ಮತ್ತು ಭದ್ರತಾ ಪ್ಯಾಚ್
ನಿಮ್ಮ ಫೋನ್‌ನ ಸಾಫ್ಟ್‌ವೇರ್ ಅನ್ನು ನಿಯಮಿತವಾಗಿ ನವೀಕರಿಸುವುದು ಅತ್ಯಗತ್ಯ. ನವೀಕರಣಗಳಲ್ಲಿ ಹೊಸ ದುರ್ಬಲತೆಗಳನ್ನು ತಡೆಯುವ ಭದ್ರತಾ ಪ್ಯಾಚ್‌ಗಳು ಸೇರಿರುತ್ತವೆ. ಆಟೋ ಅಪ್‌ಡೇಟ್‌ನ್ನು ಸಕ್ರಿಯಗೊಳಿಸಿದರೆ, ಎಲ್ಲ ಸಮಯದಲ್ಲೂ ಇತ್ತೀಚಿನ ಭದ್ರತಾ ಲಾಭವನ್ನು ಪಡೆಯಬಹುದು.

ಎರಡು ಅಂಶಗಳ ದೃಢೀಕರಣ ಮತ್ತು ಆಪ್ ಅನುಮತಿಗಳು
ನಿಮ್ಮ ಖಾತೆಗಳಿಗೆ 2FA (ಎರಡು ಅಂಶಗಳ ದೃಢೀಕರಣ) ಸಕ್ರಿಯಗೊಳಿಸಿ. ಇದರಿಂದ ಹ್ಯಾಕರ್‌ಗಳಿಗೆ ಲಾಗಿನ್ ಮಾಡುವುದು ಕಷ್ಟವಾಗುತ್ತದೆ. ಜೊತೆಗೆ, ಆಪ್‌ಗಳಿಗೆ ಅನಗತ್ಯ ಅನುಮತಿಗಳನ್ನು ನೀಡಬೇಡಿ. ಉದಾಹರಣೆಗೆ, ಹವಾಮಾನ ಅಪ್ಲಿಕೇಶನ್‌ಗೆ ಕ್ಯಾಮೆರಾ ಅಥವಾ ಸಂಪರ್ಕ ಪ್ರವೇಶದ ಅಗತ್ಯವಿಲ್ಲ.
ಸಾರ್ವಜನಿಕ ನೆಟ್‌ವರ್ಕ್‌ನಲ್ಲಿ ಎಚ್ಚರಿಕೆ
ಸಾರ್ವಜನಿಕ ವೈ-ಫೈ ಬಳಕೆ ವೇಳೆ ಎಚ್ಚರಿಕೆಯಿಂದಿರಿ. ಇಂತಹ ನೆಟ್‌ವರ್ಕ್‌ಗಳು ಹೆಚ್ಚು ಅಸುರಕ್ಷಿತವಾಗಿದ್ದು, ಹ್ಯಾಕರ್‌ಗಳು ಡೇಟಾವನ್ನು ಕದಿಯಬಹುದು. ಈ ಅಪಾಯವನ್ನು ಕಡಿಮೆ ಮಾಡಲು, VPN ಬಳಸಿ. VPN ನಿಮ್ಮ ಇಂಟರ್ನೆಟ್ ಸಂಪರ್ಕವನ್ನು ಎನ್‌ಕ್ರಿಪ್ಟ್ ಮಾಡಿ, ಸುರಕ್ಷತೆಯನ್ನು ಬಲಪಡಿಸುತ್ತದೆ.
