Saturday, October 11, 2025

Tech Tips | ಯಾರಿಗೂ ಗೊತ್ತಾಗದಂತೆ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ ನೋಡೋದು ಹೇಗೆ?

ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಅನೇಕ ಸಲಹೆಗಳು ಇವೆ, ಆದರೆ ಕೆಲವೊಮ್ಮೆ ನೀವು ಯಾರೊಬ್ಬರ ಸ್ಟೇಟಸ್ ಅನ್ನು ಅವರು ತಿಳಿಯದಂತೆ ವೀಕ್ಷಿಸಲು ಬಯಸುತ್ತೀರಿ. ಈ ರೀತಿ ಮಾಡೋದಕ್ಕೆ ಮೂರು ಸುಲಭ ವಿಧಾನಗಳು ಇವೆ. ಈ ವಿಧಾನಗಳನ್ನು ಅನುಸರಿಸಿ, ನೀವು ನಿಮ್ಮ ಸ್ನೇಹಿತರ ಸ್ಟೇಟಸ್ ಅನ್ನು ನೋಡಿದರೂ ಅವರಿಗೆ ನಿಮ್ಮ ಹೆಸರನ್ನು ಗೊತ್ತಾಗುವುದಿಲ್ಲ.

ಮೊದಲ ವಿಧಾನವು ರೀಡ್ ರಿಸಿಪ್ಟ್ ನಿಷ್ಕ್ರಿಯಗೊಳಿಸುವುದು. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ರೀಡ್ ರಿಸಿಪ್ಟ್ ಅನ್ನು ನಿಷ್ಕ್ರಿಯಗೊಳಿಸಿದರೆ, ನೀವು ಸ್ಟೇಟಸ್ ನೋಡಿದಾಗ ನಿಮ್ಮ ಹೆಸರು ಯಾರಿಗೂ ಕಾಣುವುದಿಲ್ಲ. ಇದನ್ನು setting > profile > privacy > ರೀಡ್ ರಿಸಿಪ್ಟ್ ಮೂಲಕ ಸಕ್ರಿಯಗೊಳಿಸಬಹುದು.

ಎರಡನೆಯ ವಿಧಾನವು ಫೈಲ್ ಮ್ಯಾನೇಜರ್ ಮೂಲಕ ಸ್ಟೇಟಸ್ ವೀಕ್ಷಿಸುವುದು. ಆಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಫೈಲ್ ಮ್ಯಾನೇಜರ್‌ಗೆ ಹೋಗಿ, ಆಂತರಿಕ ಸಂಗ್ರಹಣೆಯಲ್ಲಿ WhatsApp > Media > Statuses ಫೋಲ್ಡರ್ ಅನ್ನು ತೆರೆದು ಸ್ಟೇಟಸ್ ವೀಕ್ಷಿಸಬಹುದು. ಕೆಲವು ಫೋನ್‌ಗಳಲ್ಲಿ ‘Hidden Files’ ಆಯ್ಕೆಯನ್ನು ಸಕ್ರಿಯಗೊಳಿಸಬೇಕು.

ಮೂರನೆಯ ವಿಧಾನ WhatsApp ವೆಬ್‌ನಲ್ಲಿ ಅಜ್ಞಾತ ಮೋಡ್ ಬಳಸಿ ಸ್ಟೇಟಸ್ ವೀಕ್ಷಿಸುವುದು. ನಿಮ್ಮ ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಕ್ರೋಮ್ ಬ್ರೌಸರ್‌ನಲ್ಲಿ ಅಜ್ಞಾತ ಟ್ಯಾಬ್ ತೆರೆಯಿರಿ. Web.whatsapp.com ನಲ್ಲಿ ಲಾಗಿನ್ ಆದ ಬಳಿಕ, ಸ್ಟೇಟಸ್ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು Wi-Fi ಆಫ್ ಮಾಡುವ ಮೂಲಕ ಸ್ಟೇಟಸ್ ಪರಿಶೀಲಿಸಬಹುದು. ಈ ವಿಧಾನದಲ್ಲಿ ನಿಮ್ಮ ವೀಕ್ಷಣೆ ಯಾರು ಗಮನಿಸೋದಿಲ್ಲ.

error: Content is protected !!