Saturday, October 18, 2025

Deepavali | ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯ ಪೂಜೆ ಮಾಡೋದು ಹೇಗೆ?

ದೀಪಾವಳಿ ಹಬ್ಬವು ಬೆಳಕು, ಸಂತೋಷ ಮತ್ತು ಸಮೃದ್ಧಿಯ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತವೆ. ಹಬ್ಬದ ಪ್ರಮುಖ ಅಂಗವೆಂದರೆ ತಾಯಿ ಲಕ್ಷ್ಮೀ ದೇವಿಯನ್ನು ಪೂಜಿಸುವುದು, ಏಕೆಂದರೆ ಆಕೆ ಸಂಪತ್ತು, ಸಮೃದ್ಧಿ ಮತ್ತು ಸುಖ-ಶಾಂತಿಯನ್ನು ಮನೆಗೆ ತರುವ ಶಕ್ತಿಶಾಲಿ ದೇವತೆ. ಮನೆಯಲ್ಲೇ ಈ ಲಕ್ಷ್ಮೀ ಪೂಜೆಯನ್ನು ಸರಳವಾಗಿ ಹೇಗೆ ಮಾಡಬಹುದು ಎಂಬುದು ಈ ಲೇಖನದಲ್ಲಿ ಹೇಳ್ತೇವೆ.

ಪೂಜೆಯನ್ನು ಪ್ರಾರಂಭಿಸುವ ಮೊದಲು ಮನೆ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಮನೆಯಲ್ಲಿರುವ ದುಷ್ಟ ಶಕ್ತಿಗಳನ್ನು ದೂರ ಮಾಡುವ ನಂಬಿಕೆಯೊಂದಿಗೆ ಸ್ವಚ್ಛತೆ ಮಾಡುವುದು ಮುಖ್ಯ. ಕೆಲವೊಂದು ಪ್ರದೇಶಗಳಲ್ಲಿ ಶುದ್ಧೀಕರಣಕ್ಕಾಗಿ ಗಂಗಾಜಲ ಸಿಂಪಡಿಸುವುದು ಸಹ ಮಾಡಬಹುದು.

  • ಪೂಜಾ ಮಂಟಪ ಸ್ಥಾಪನೆ: ದೇವರ ಮುಂದೆ ಮಂಟಪವನ್ನು ಮಾಡುವುದು ಬಹಳ ಮುಖ್ಯ. ಮಂಟಪದ ಒಳಗೆ ಕೆಂಪು ಬಟ್ಟೆ ಹರಡಿ, ಧಾನ್ಯಗಳನ್ನು ಇರಿಸಿ. ಅದರ ಮೇಲೆ ಅರಿಶಿನದಿಂದ ಕಮಲ ರೇಖೆ ಬಿಡಿಸಿ, ಲಕ್ಷ್ಮೀ ಮತ್ತು ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಇರಿಸಬೇಕು.
  • ಕಲಶ ಸ್ಥಾಪನೆ: ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ, ನಾಣ್ಯಗಳು, ವೀಳ್ಯದೆಲೆ, ಒಣ ಹಣ್ಣುಗಳು, ಏಲಕ್ಕಿ, ಲವಂಗ ಹಾಕಿ, ಮೇಲಿಗೆ ಮಾವಿನ ಎಲೆಗಳನ್ನು ಇಟ್ಟು, ಮಧ್ಯದಲ್ಲಿ ತೆಂಗಿನಕಾಯಿ ಇರಿಸಿ. ಕಲಶವನ್ನು ಪೂಜಾ ಪೀಠದ ಮೇಲೆ ಇಡಬೇಕು ಮತ್ತು ಕುಂಕುಮ, ಹೂವುಗಳಿಂದ ಅಲಂಕರಿಸಬೇಕು.
  • ಮೂರ್ತಿ ಶುದ್ಧೀಕರಣ ಮತ್ತು ನೈವೇದ್ಯ: ವಿಗ್ರಹಗಳನ್ನು ಶುದ್ಧ ನೀರು, ಪಂಚಾಮೃತ, ಗಂಧದ ನೀರು ಮತ್ತು ಪನ್ನೀರುಗಳಿಂದ ತೊಳೆಯಬೇಕು. ನಂತರ ಅರಿಶಿನ, ಕುಂಕುಮ, ಗಂಧದಿಂದ ಅಲಂಕರಿಸಿ, ಹೂವುಗಳನ್ನು ಸಮರ್ಪಿಸಬೇಕು. ನೈವೇದ್ಯಕ್ಕೆ ಬಾದಶ, ಲಡ್ಡು, ಹಣ್ಣು, ತೆಂಗಿನಕಾಯಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬಹುದು.
  • ಕೀರ್ತನೆ ಮತ್ತು ಪೂಜೆ: ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸಿ, ದೇವಿಯ ಆಶೀರ್ವಾದವನ್ನು ಬೇಡಬೇಕು. ಮನೆತನದ ಹಿರಿಯರು ಲಕ್ಷ್ಮಿಯ ಕಥೆಯನ್ನು ಓದಿ, ಉಳಿದವರು ಗಮನದಿಂದ ಕೇಳಬೇಕು.
error: Content is protected !!