ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಗೆ ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್ ಆಗಮನವಾಗಲಿದ್ದು, ಈ ಹಿನ್ನೆಲೇ ಹೈ ಅಲರ್ಟ್ ಘೋಷಿಸಲಾಗಿದೆ
ಸ್ವಾಟ್ ತಂಡಗಳು, ಸ್ನೈಪರ್ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಸೇರಿದಂತೆ ಭಾರಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ವಾಹನಗಳ ತಪಾಸಣೆ ನಡೆಯುತ್ತಿದೆ. ಪ್ರತಿ ಮೂಲೆ ಮೂಲೆಯಲ್ಲಿ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿದೆ.
ವ್ಲಾದಿಮಿರ್ ಪುಟಿನ್ ದೆಹಲಿಯಲ್ಲಿ ಲ್ಯಾಂಡ್ ಆಗುತ್ತಿದ್ದಾರೆ. ಹೀಗಾಗಿ ಭದ್ರತಾ ಪಡೆಗಳು ಭಾರಿ ಭದ್ರತೆ ಕೈಗೊಂಡಿದೆ. ಪುಟಿನ್ ಎರಡು ದಿನಗಳ ಭೇಟಿ ಕಾರಣದಿಂದ ದೆಹಲಿಯಲ್ಲಿ ಎರಡು ದಿನ ಹೈ ಅಲರ್ಟ್ ಘೋಷಿಸಿಲಾಗಿದೆ. ಪುಟಿನ್ ರಷ್ಯಾದಿಂದ ತೆರಳುವ ಸಮಯದಿಂದ ಹಿಡಿದು ಮರಳಿ ರಷ್ಯಾದಲ್ಲಿ ಲ್ಯಾಂಡ್ ಆಗುವ ವರೆಗೆ ಪ್ರತಿ ನಿಮಿಷವೂ ಭದ್ರತಾ ಪಡೆಗಳ ಟ್ರಾಕ್‌ನಲ್ಲಿರಲಿದೆ. ಪ್ರತಿ ನಿಮಿಷವೂ ಹಲವು ಭದ್ರತಾ ಎಜೆನ್ಸಿಗಳು ಪರಿಶೀಲನೆ ನಡೆಸಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಭದ್ರತಾ ಪಡೆಗಳು, ಪುಟಿನ್ ಅವರ ಭದ್ರತ ಪಡೆಗಳು ಪ್ರತಿ ನಿಮಿಷ ಸಂಪರ್ಕದಲ್ಲಿ ಇರಲಿದೆ. 5,000 ಪೊಲೀಸ್ ಪಡೆಗಳ ನಿಯೋಜನೆ ಮಾಡಲಾಗಿದೆ. ಪುಟಿನ್ ಸಂಚಾರ ಮಾರ್ಗ, ಟ್ರಾಪಿಕ್ ಎಲ್ಲವವನ್ನು ಮಾನಿಟರ್ ಮಾಡಲಾಗುತ್ತಿದೆ. ಎಲ್ಲಾ ರೂಟ್‌ಗಳನ್ನು ಮ್ಯಾಪ್ ಮಾಡಲಾಗಿದೆ. ವಿವಿಐಪಿ ಮೂವಮೆಂಟ್‌ಗಳಲ್ಲಿ ಮೊದಲೇ ಭದ್ರತಾ ಪಡೆಗಳು ನಿಯೋಜನೆ ಮಾಡಲಾಗಿದೆ. ಹಲವು ಹಂತದ ಭದ್ರತೆ ಕೈಗೊಳ್ಳಲಾಗಿದೆ. ಆ್ಯಂಟಿ ಡ್ರೋನ್ ಸಿಸ್ಟಮ್ ಹಾಕಲಾಗಿದೆ. ಕ್ವಿಕ್ ರಿಯಾಕ್ಷನ್ ಟೀಮ್, ಆ್ಯಂಟಿ ಟೆರರ್ ಯೂನಿಟ್ ಜೊತೆಗೆ ಮುಫ್ತಿಯಲ್ಲೂ ಪೊಲೀಸರು ತೀವ್ರ ಮುನ್ನಚ್ಚರಿಕೆ ವಹಿಸಲಿದ್ದಾರೆ.
ಇಂದು ಸಂಜೆ ದೆಹಲಿಯಲ್ಲಿ ಲ್ಯಾಂಡ್ ಆಗಲಿರುವ ವ್ಲಾದಿಮಿರ್ ಪುಟಿನ್ ರಾತ್ರಿ ಪ್ರಧಾನಿ ಮೋದಿ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಪುಟಿನ್ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದೆ. ಪ್ರಮುಖವಾಗಿ ರಕ್ಷಣಾ ವ್ಯವಸ್ಥೆ, ತೆರಿಗೆ, ವ್ಯಾಪಾರ ಸೇರಿದಂತೆ ಹಲವು ಮಾತುಕತೆ ನಡೆಯಲಿದೆ. ಇದೇ ವೇಳೆ 23ನೇ ಭಾರತ ಹಾಗೂ ರಷ್ಯಾ ದ್ವಿಪಕ್ಷೀಯ ಸಂಬಂಧದ ಸಭೆಯಲ್ಲಿ ಮೋದಿ ಹಾಗೂ ಪುಟಿನ್ ಪಾಲ್ಗೊಳ್ಳಲಿದ್ದಾರೆ.

