ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ನಗರ ಅಪರಾಧ ವಿಭಾಗ ಸಿಬ್ಬಂದಿ ಬಂಧಿಸಿ ಅವರಿಂದ ೭.೭೪ ಲಕ್ಷ ರೂ. ಮೌಲ್ಯದ ೧೫.೪೮೩ ಕೆ.ಜಿ. ಗಾಂಜಾ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಹಣ್ಣಿನ ವ್ಯಾಪಾರಿ ಫರೀಜಖಾನ್ ಜಹೀರಖಾನ್ ಮತ್ತು ಆಟೊ ಚಾಲಕ ಸಲ್ಮಾನ್ ರೈಯಿಜಖಾನ್ ಬಂಽತ ಆರೋಪಿಗಳು.ಮಹಾರಾಷ್ಟ್ರದಿಂದ ಹಾವೇರಿ ಜಿಲ್ಲೆಗೆ ಹುಬ್ಬಳ್ಳಿ ಮಾರ್ಗವಾಗಿ ಐದು ಕೆ.ಜಿ.ಯ ಮೂರು ಬಂಡಲ್‌ನಲ್ಲಿ ಗಾಂಜಾ ತುಂಬಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಆಗ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ಕಾರಿನಲ್ಲಿ ಗಾಂಜಾವನ್ನು ಮಹಾರಾಷ್ಟ್ರದಿಂದ ಹಾವೇರಿಯ ರಾಣಿಬೆನ್ನೂರಿಗೆ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿದ ಸಿಸಿಬಿ ಪೊಲೀಸರು, ನ್ಯೂ ಇಂಗ್ಲಿಷ್ ಸ್ಕೂಲ್ ಮತ್ತು ಗಬ್ಬೂರು ವೃತ್ತದಲ್ಲಿ ದಾಳಿಗೆ ಸಿದ್ಧತೆ ನಡೆಸಿದ್ದರು. ಧಾ- ಹು ಬೈಪಾಸ್ ರಸ್ತೆ ಮೂಲಕ ಗಬ್ಬೂರು ವೃತ್ತದ ಬಳಿ ಬಂದಾಗ, ಬ್ಯಾರಿಕೇಡ್ ಹಾಕಿ, ಆರೋಪಿಗಳನ್ನು ಗಾಂಜಾ ಸಮೇತ ಬಂಽಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್‌ಐಗಳಾದ ಮಂಜುನಾಥ ಟಿ.ಎಂ., ರೂಪಕ್ ಡಿ., ಸಿಬ್ಬಂದಿಯಾದ ಎಂ.ಎಂ. ವನಹಳ್ಳಿ, ಆರ್.ಜಿ. ಅಕ್ಕೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


