March 15, 2026
Sunday, March 15, 2026
spot_img

ಕೆಂಪೇಗೌಡ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ಬೃಹತ್ ಬಲೂನ್ ಹಾರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಬಂಧಿತ ಕಾರ್ಯಾಚರಣೆ ಪ್ರದೇಶದೊಳಗೆ ಬೃಹತ್‌ ಗಾತ್ರದ ಬಲೂನ್‌ ಕಾಣಿಸಿದೆ.

ಜಾಹೀರಾತು ಉದ್ದೇಶಕ್ಕಾಗಿ ಬಳಸುವ ಬೃಹತ್‌ ಗಾತ್ರದ ಬಲೂನ್‌ನ್ನು ಅಧಿಕೃತವಾಗಿ ಹಾರಿಸಲಾಗಿದೆ. ಇದು ವಾಯುಯಾನ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆಯಾಗಿದೆ ಮತ್ತು ಭದ್ರತಾ ಕಳವಳಗಳನ್ನು ಉಂಟುಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯನ ವಾಯುಯಾನ ಭದ್ರತಾ ಗುಂಪಿನ ಎಲ್.ನಾಗೇಂದ್ರನ್ ಅವರು ಫೆಬ್ರುವರಿ 8 ರಂದು ದೂರು ದಾಖಲಿಸಿದ್ದಾರೆ. ಜನವರಿ 5 ರಂದು ಕೆಐಎ ಕಾರ್ಯಾಚರಣೆ ಪ್ರದೇಶದಲ್ಲಿ ‘ಬಿಸಿಡಿ ಕನ್‌ಸ್ಟ್ರಕ್ಷನ್’ ಎಂಬ ಹೆಸರಿನ ಬಲೂನ್ ಅನಧಿಕೃತವಾಗಿ ಹಾರುತ್ತಿರುವುದು ಕಂಡುಬಂದಿದೆ ಎಂದು ನಾಗೇಂದ್ರನ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಗಮನಿಸಿದ ಎಎಸ್‌ಜಿ/ಬಿಡಿಡಿಎಸ್ ಸಿಬ್ಬಂದಿ ತಕ್ಷಣವೇ ಅದನ್ನು ತಡೆದು ಪರಿಶೀಲಿಸಿದ್ದಾರೆ.

ಪರಿಶೀಲನೆಯ ನಂತರ, ‘BCD ಕನ್‌ಸ್ಟ್ರಕ್ಷನ್’ ಎಂಬ ಹೆಸರನ್ನು ಹೊಂದಿರುವ ಬಲೂನ್ KIA ಯ ರೆಡ್ ಝೋನ್/ಹಾರಾಟ ನಿಷೇಧ ಪ್ರದೇಶದಲ್ಲಿ ಇರುವುದು ಕಂಡುಬಂದಿದೆ’ ಎಂದು ನಾಗೇಂದ್ರನ್ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !