Wednesday, October 29, 2025

ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರೀ ಬೆಳವಣಿಗೆ: ಒಂದು ದಶಕದಲ್ಲಿ 35ರಿಂದ 197 ಗಿಗಾ ವ್ಯಾಟ್ ಗೆ ಹೆಚ್ಚಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕಳೆದೊಂದು ದಶಕದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವೃದ್ಧಿಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಲಾಗಿದೆ.

2014ರಲ್ಲಿದ್ದ ನವೀಕರಿಸಲಬಹುದಾದ ಇಂಧನ ಸಾಮರ್ಥ್ಯ 35 ಗಿಗಾ ವ್ಯಾಟ್ ಗಳಿಂದ 197 ಗಿಗಾ ವ್ಯಾಟ್ ಗಳಿಗಿಂತಲೂ 5 ಪಟ್ಟು ಉತ್ಪಾದಿಸಲಾಗುತ್ತಿದೆ.

ಬೃಹತ್ ಜಲವಿದ್ಯುತ್ ಸೌಲಭ್ಯಗಳಿಂದ ಉತ್ಪಾದಿಸುವ ವಿದ್ಯುತ್ತನ್ನು ಹೊರತುಪಡಿಸಿ ಈ ಸಾಧನೆ ಮಾಡಲಾಗಿದೆ. 2030ರ ವೇಳೆಗೆ 5 ಸಾವಿರ ಗಿಗಾ ವ್ಯಾಟ್ ಗಳ ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.

ಪ್ರಸಕ್ತ ವರ್ಷದಲ್ಲಿ ಕೇಂದ್ರ ನವೀಕರಿಸಬಹುದಾದ ಇಂಧನ ಅನುಷ್ಠಾನ ಸಂಸ್ಥೆಗಳು 5.6 ಗಿಗಾ ವ್ಯಾಟ್ ಗಳಿಗೆ ಬಿಡ್ ಗಳನ್ನು ಸಲ್ಲಿಸಿದೆ. ಆದರೆ, ರಾಜ್ಯ ಸಂಸ್ಥೆಗಳು 3.5 ಮೆಗಾ ವ್ಯಾಟ್ ಗಳಿಗೆ ಬಿಡ್ ಗಳನ್ನು ಸಲ್ಲಿಸಿವೆ. ಹೆಚ್ಚುವರಿಯಾಗಿ ವಾಣಿಜ್ಯ ಮತ್ತು ಕೈಗಾರಿಕೆ ಗ್ರಾಹಕರು ಈ ವರ್ಷ 6 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸುವ ಸಾಧ್ಯತೆಯಿದೆ.

error: Content is protected !!