March 7, 2026
Saturday, March 7, 2026
spot_img

ಹಾಲಿನ ದರದಲ್ಲಿ ಭರ್ಜರಿ ಹೆಚ್ಚಳ: ಬೇಸಿಗೆಯಲ್ಲಿ ರೈತರಿಗೆ ಕೂಲ್ ನ್ಯೂಸ್ ನೀಡಿದ ಚಿಮುಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರಿಗೆ ಚಿಮುಲ್ ಒಕ್ಕೂಟವು ಭರ್ಜರಿ ಸಿಹಿ ಸುದ್ದಿ ನೀಡಿದೆ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಒಕ್ಕೂಟವು ಸುಮಾರು 2 ಕೋಟಿ ರೂಪಾಯಿ ಲಾಭ ಗಳಿಸಿದ್ದು, ಈ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಮುಂದಾಗಿದೆ.

ಒಕ್ಕೂಟವು ಪ್ರತಿ ಲೀಟರ್ ಹಾಲಿನ ಮೇಲೆ 1.50 ರೂಪಾಯಿ ಹೆಚ್ಚುವರಿ ದರವನ್ನು ನೀಡಲು ನಿರ್ಧರಿಸಿದೆ. ಈ ಪರಿಷ್ಕೃತ ದರವು ಮುಂದಿನ ಮೇ ತಿಂಗಳವರೆಗೆ ಅನ್ವಯವಾಗಲಿದೆ ಎಂದು ಚಿಮುಲ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ.

ರೈತರಿಗೆ ಸಿಗುವ ಒಟ್ಟು ಮೊತ್ತ:

ಚಿಮುಲ್ ನೀಡುತ್ತಿರುವ ಪ್ರಸ್ತುತ ದರ: 36.90

ಘೋಷಿತ ಹೆಚ್ಚುವರಿ ದರ: 1.50

ಸರ್ಕಾರದ ಸಬ್ಸಿಡಿ: 5.00

ರೈತರಿಗೆ ಸಿಗಲಿರುವ ಒಟ್ಟು ಮೊತ್ತ: 43.40 (ಪ್ರತಿ ಲೀಟರ್‌ಗೆ)

ರಾಜ್ಯದಲ್ಲೇ ಅತಿ ಹೆಚ್ಚು ಹಾಲಿನ ದರ ನೀಡುವ ಒಕ್ಕೂಟಗಳಲ್ಲಿ ಒಂದಾಗಿರುವ ಚಿಮುಲ್, ಈ ನಿರ್ಧಾರದ ಮೂಲಕ ಜಿಲ್ಲೆಯ ಹೈನುಗಾರರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಮತ್ತು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !