Sunday, October 12, 2025

‘ನೀನೇ ನೀರು ತೆಗೆದುಕೊಂಡು ಕುಡಿ’ ಎಂದ ಹೆಂಡತಿಗೆ ಲಟ್ಟಣಿಗೆಯಿಂದ ಹೊಡೆದ ಪತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿಯೋರ್ವ ತನ್ನ ಪತ್ನಿಯ ಮೇಲೆ ಲಟ್ಟಣಿಗೆಯಿಂದ ಹೊಡೆದ ಘಟನೆ ಸೆಪ್ಟೆಂಬರ್ 24 ರಂದು ನಡೆದಿದ್ದು, ಈಗ ಬೆಳಕಿಗೆ ಬಂದಿದೆ.

ಪತಿ ಛೋಟೆಲಾಲ್ ಸಿಂಗ್ ಕುಡಿಯಲು ನೀರು ಕೇಳಿದಾಗ ಪತ್ನಿ ಪ್ರೀತಿ ಸಿಂಗ್ ಅವರಿಗೆ “ನೀರು ನೀನೇ ತಗೊಂಡು ಕುಡಿ” ಎಂದು ಹೇಳಿದ್ದಾರೆ. ಈ ಮಾತಿಗೆ ಕೋಪಗೊಂಡ ಛೋಟೆಲಾಲ್ ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದಾರೆ.

ಮಧ್ಯಪ್ರದೇಶ ಮೂಲದ 26 ವರ್ಷದ ಪ್ರೀತಿ ಸಿಂಗ್ ಗಂಭೀರ ಗಾಯಗೊಂಡು ಕೋಮಾದ ಸ್ಥಿತಿಗೆ ಬಂದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದರೂ, ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿ ಛೋಟೆಲಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯವರು ಪ್ರಕರಣದ ತನಿಖೆಯನ್ನು ಮುಂದುವರಿಸುತ್ತಿದ್ದಾರೆ.

error: Content is protected !!